ದಾವಣಗೆರೆ,ಅ.14- ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ. ತಿಪ್ಪೇಸ್ವಾಮಿ ಅವರು ನಿಧನರಾದ ಹಿನ್ನೆಲೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಪ್ಪೇಸ್ವಾಮಿ ಅವರ ನಿವಾಸಕ್ಕೆ ನಿನ್ನೆ ಭೇಟಿ ನೀಡಿ, ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ತಿಪ್ಪೇಸ್ವಾಮಿ ಧರ್ಮಪತ್ನಿ ಶ್ರೀಮತಿ ನಾಗರತ್ನಮ್ಮ, ಅವರ ಪುತ್ರ – ಕಾಂಗ್ರೆಸ್ ಮುಖಂಡ ಎಂ.ಟಿ.ಸುಭಾಶ್ಚಂದ್ರ ಮತ್ತು ಕುಟುಂಬ ಸದಸ್ಯರು ಜಗದ್ಗುರುಗಳವರನ್ನು ಬರ ಮಾಡಿಕೊಂಡು ಗೌರವಿಸಿದರು.
January 10, 2025