ರಾಣೇಬೆನ್ನೂರಿನಲ್ಲೂ ಸಂಚರಿಸಿದ ಎಸ್ಪಿ

ರಾಣೇಬೆನ್ನೂರು, ಅ.11- ನಗರ ಪೊಲೀಸರು ಪೋಸ್ಟ್‌ ಸರ್ಕಲ್ ನಿಂದ ಎಂ.ಜಿ. ರಸ್ತೆ ಮೂಲಕ ಕುರುಬಗೇರಿ ಕ್ರಾಸ್‌ವರೆಗೆ ಇಂದು ಸಂಜೆ ಪಾದಯಾತ್ರೆ ಮೂಲಕ ಸಂಚರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಸ್ಕ್ ಧರಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.

ಸರ್ಕಲ್‌ನಲ್ಲಿ ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಕಳೆದ 8 ತಿಂಗಳುಗಳಿಂದ ಜಗತ್ತೇ ಕೋವಿಡ್‌ನಿಂದ ನರಳುತ್ತಿದ್ದು ಎಲ್ಲರ ಬದುಕು ಏರುಪೇರಾಗಿದೆ. ಈಗ ಅದು ನಮ್ಮ ಸಂಗಾತಿ
ಯಾಗಿದ್ದು ಅದನ್ನು ತಡೆಯಲು ನಿಯಮಗಳ ಪಾಲನೆ ಕಡ್ಡಾಯವೆಂದು ಹೇಳಿದರು.

ಮಾಸ್ಕ್ ಧರಿಸದ ಅನೇಕರಿಂದ 100 ರೂ.ಗಳ ದಂಡ ವಸೂಲು ಮಾಡಲಾಯಿತು. ಈ ದಂಡದ ಮೊತ್ತ ಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು. ಅಲ್ಲದೇ ನಿಯಮ ಪಾಲನೆ ಕಡ್ಡಾಯವಾದರೂ ಸಹ ಜನತೆ ಸಹಕರಿಸದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ದಂಡ ವಸೂಲಿ ನಿರಂತರವೆಂದು ಹೇಳಲಾಯಿತು. 

ನಗರ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಐ. ಗೌಡಪ್ಪಗೌಡ, ಗ್ರಾಮೀಣ ಸರ್ಕಲ್ ಇನ್‌ಸ್ಪೆಕ್ಟರ್ ಭಾಗ್ಯವತಿ, ನಗರ ಎಸ್‌ಐ ಪ್ರಭು ಕೆಳಗಿನಮನಿ, ಸಂಚಾರಿ ಠಾಣೆಯ ಎನ್.ಎಂ. ಉದಗಟ್ಟಿ ಮತ್ತಿತರರಿದ್ದರು.

error: Content is protected !!