ಹರಪನಹಳ್ಳಿ ಕಾರ್ಯಕ್ರಮದಲ್ಲಿ ಕಿಡಿ ಕಾರಿದ ಕೆಪಿಸಿಸಿ ವಕ್ತಾರ ಪಿ.ಟಿ.ಪರಮೇಶ್ವರ ನಾಯ್ಕ್
ಹರಪನಹಳ್ಳಿ, ಅ.5- ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ನೂತನ ಕೆಪಿಸಿಸಿ ವಕ್ತಾರರೂ ಆಗಿರುವ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಕಿಡಿ ಕಾರಿದ್ದಾರೆ.
ಕೆಪಿಸಿಸಿ ವಕ್ತಾರರಾಗಿ ನೇಮಕಗೊಂಡಿರುವ ತಮಗೆ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಗಳು ತಮ್ಮ ಅಧಿಕಾರವನ್ನು ದುರುಪಯೋಗಪ ಡಿಸಿಕೊಂಡು ಸಿಬಿಐ ಮೂಲಕ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ ಸಂಸದ ಡಿ.ಕೆ.ಸುರೇಶ್ ಹಾಗೂ ಅವರ ಆಪ್ತರ ನಿವಾಸಗಳ ಮೇಲೆ 16 ಕಡೆ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ದ್ವೇಷದ ರಾಜಕಾರಣ ಮಾಡುತ್ತಿವೆ ಎನ್ನುವುದು ಸಾಬೀತಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಹರಪನಹಳ್ಳಿ ಫೋರ್ಸ್ ಸಮಿತಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ. ರಾಜಶೇಖರ್, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಭತ್ತಳ್ಳಿ ಎಸ್.ಮಂಜುನಾಥ್, ಕೆಪಿಸಿಸಿ ರಾಜ್ಯ ಸಂಚಾಲಕ ನಜೀರ್ ಅಹ್ಮದ್ ಮಾತನಾಡಿ, ಪಕ್ಷದ ವರಿಷ್ಠರು ಪರಮೇಶ್ವರನಾಯ್ಕ ಅವರಿಗೆ ಬಳ್ಳಾರಿ
ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹೆಚ್.ಬಿ.ಪರಶುರಾಮಪ್ಪ, ಡಾ.ಉತ್ತಂಗಿ ಮಂಜು ನಾಥ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಯರಬಳ್ಳಿ ಉಮಾಪತಿ ಮಾತನಾಡಿ, ಪಕ್ಷದ ವರಿಷ್ಠರು ಹರಪನಹಳ್ಳಿ ತಾಲ್ಲೂಕಿನ ಪಕ್ಷದ ಉಸ್ತುವಾರಿಯನ್ನು ಪಿ.ಟಿ.ಪರಮೇಶ್ವರನಾಯ್ಕ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿ ಜಿಲ್ಲಾ ಗ್ರಾಮಾಂತರ ಟಾಸ್ಕ್ ಫೋರ್ಸ್ ಸಮಿತಿಯ ಜಿಲ್ಲಾ ಕಾರ್ಯಪಡೆಯ ಸದಸ್ಯ ಶಶಿಧರ್ ಪೂಜಾರ್, ಪುರಸಭೆ ಸದಸ್ಯ ರಾದ ಲಾಟಿ ದಾದಾಪೀರ್, ಜೋಗಿನರ ಭರ ತೇಶ್, ಹೆಚ್.ಕೊಟ್ರೇಶ್, ಅರಸೀಕೆರೆ ಬ್ಲಾಕ್ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಕೆ.ಎಂ.ಶಿವಕುಮಾರಸ್ವಾಮಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಟಿ.ಭರತ್, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ವಾರದ ಗೌಸ್ ಮೋಹಿದ್ದೀನ್, ಚಿಗಟೇರಿ ಬ್ಲಾಕ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಮುತ್ತಿಗಿ ಸಾಬಳ್ಳಿ ಜಂಬಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಟಿ.ಬಸವನಗೌಡ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಲ್.ಪೋಮ್ಯನಾಯ್ಕ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಿರೇಮೇಗಳಗೇರೆ ಹನುಮಂತಪ್ಪ, ತೊಗರಿಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ನೇಮ್ಯಾನಾಯ್ಕ, ಪಿ.ವೇದನಾಯ್ಕ, ಎಪಿಎಂಸಿ ಅಧ್ಯಕ್ಷ ನಂದಿಬೇವೂರು ಅಶೋಕ್, ಮುಖಂ ಡರಾದ ವಕೀಲ ಮತ್ತಿಹಳ್ಳಿ ಅಜ್ಜಣ್ಣ, ಎಲ್.ಬಿ.ಹಾಲೇಶನಾಯ್ಕ, ಚಿರಸ್ತಹಳ್ಳಿ ಪಿ.ಮರಿ ಯಪ್ಪ, ಪಿ.ಪರಶುರಾಮಪ್ಪ, ಕೆ.ರಿಯಾಜ್, ಎಂ.ಕೆ.ರಾಯಲ್ ಸಿದ್ದೀಕ್, ಮಹಾಂತೇಶ್ ನಾಯ್ಕ್ ಸೇರಿದಂತೆ, ಮತ್ತಿತರರು ಉಪಸ್ಥಿತರಿದ್ದರು.