ಹರಪನಹಳ್ಳಿಯಲ್ಲಿ ಎಂ.ಪಿ. ಲತಾ ನೇತೃತ್ವದಲ್ಲಿ ಪ್ರತಿಭಟನೆ
ಹರಪನಹಳ್ಳಿ, ಅ.4 – ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಂದು ಹಾಕಿರು ವುದನ್ನು ಮತ್ತು ಅತ್ಯಾಚಾರ ಸಂತ್ರಸ್ತೆಯ ಕುಟುಂಬ ದವರ ಭೇಟಿಗಾಗಿ ತೆರಳುತ್ತಿದ್ದ ರಾಹುಲ್‍ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದು ಅನುಚಿತವಾಗಿ ವರ್ತಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ತಾಲ್ಲೂಕು ಕಾಂಗ್ರೆಸ್ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಶನಿವಾರ ಸಂಜೆ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಲಾಯಿತು.
ತಾ.ಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಮೈದೂರು ರಾಮಪ್ಪ, ಕಂಚಿಕೇರಿ ಜಯಲಕ್ಷ್ಮಿ, ಶಶಿಕುಮಾರ್, ರಾಯದುರ್ಗದ ವಾಗೀಶ್, ಗುಡಿ ನಾಗರಾಜ್, ಕನಕಬಸಾಪುರ ಮಂಜುನಾಥ, ಹಲುವಾಗಲು ಎನ್.ಟಿ.ರತ್ನಮ್ಮ, ಉಮಾಮಹೇಶ್ವರಿ, ಕವಿತಾ ಸುರೇಶ್, ಭೋವಿ ರೇಣುಕಮ್ಮ, ಗೊಂಗಡಿ ಸಹನ ನಾಗರಾಜ್, ಚೆನ್ನಮ್ಮ ರಾಮಣ್ಣ, ಮಟ್ಟೇರ ಮುತ್ತಣ್ಣ, ಉದಯಶಂಕರ್, ದ್ಯಾಪನಹಳ್ಳಿ ವೃಷಭೇಂದ್ರಪ್ಪ, ಕಲ್ಲಹಳ್ಳಿ ಗೋಣೆಪ್ಪ, ಅರಸನಾಳು ಸೋಮು, ಮಾರುತಿ, ಕುಂಚೂರು ಶಫೀವುಲ್ಲಾ, ಕೆ.ಭರಮಪ್ಪ, ನಿಲುವಂಜಿ ಅಶೋಕ್, ಸಾಸ್ವಿಹಳ್ಳಿ ನಾಗರಾಜ್, ಅಲ್ಮರಸೀಕೆರೆ ಮಂಜುನಾಥ, ಮತ್ತೂರು ಬಸವರಾಜ್, ಅಂಜಿನಪ್ಪ, ಚಿಕ್ಕಳ್ಳಿ ನಾಗರಾಜ್, ಕುಂಚೂರು ಸಂಜೀವಪ್ಪ, ಶೌಕತ್‍ಅಲಿ, ಪ್ರಕಾಶ್, ಮೌನೇಶ್ ಮತ್ತಿತರರು ಭಾಗವಹಿಸಿದ್ದರು.