ರಾಣೇಬೆನ್ನೂರು, ಅ. 1- ಕಳಪೆ ಕಾಮಗಾರಿ ಮಾಡಿದವರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಶಾಸಕರು, ಡಿಸೆಂಬರ್ 25 ರಂದು 24×7 ಯೋಜನೆಯಲ್ಲಿ ನಗರದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ನೀಡಿರುವ ಪತ್ರಿಕಾ ಹೇಳಿಕೆ ನೋವು ತರುವಂತಹದ್ದಾಗಿದೆ ಎಂದು ಈ ಯೋಜನೆಯ ತನಿಖೆಗೆ ಒತ್ತಾಯಿಸಿ, ಧರಣಿ ನಡೆಸಿರುವ ಸದಸ್ಯರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹೊಣೆ ಇರುವ ನಾವು, ಕಾಮಗಾರಿಗಳು ಹತ್ತಾರು ವರ್ಷ ಬಾಳಿಕೆ ಬರುವಂತಿರಬೇಕು. ಆದರೆ ಈಗ ನಡೆದಿರುವ ಯುಜಿಡಿ, ಕುಡಿಯುವ ನೀರು ಸರಬರಾಜು ಇವು ವರ್ಷ ತುಂಬುವುದರೊಳಗೆ ಹಾಳಾಗುವಂತಿವೆ ಎಂದು ಸದಸ್ಯರು ಆರೋಪಿಸಿದರು.
ರಾಜೀನಾಮೆ ಸವಾಲು : ನಗರದಲ್ಲಿ ಈಗ ನಡೆದಿರುವ ಕಾಮ ಗಾರಿಗಳ ಬಗ್ಗೆ ಸಮಗ್ರ ತನಿಖೆ ಮಾಡಿಸಲಿ. ಅವು ಗುಣಮಟ್ಟದ್ದಾಗಿವೆ ಎಂದರೆ ನಾನು ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ. ಅವು ಕಳಪೆಯಾಗಿವೆ ಎಂದಾ ದರೆ ಶಾಸಕರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು ಎಂದು ನಿಂಗಪ್ಪ ಕೋಡಿಹಳ್ಳಿ ಸವಾಲು ಹಾಕಿದರು.
ಅಪ್ರಬುದ್ಧ ಆಡಳಿತ : ಯೋಜನೆ, ಕಾಮಗಾರಿಗಳ ಬಗ್ಗೆ ತಿಳುವಳಿಕೆ ಇರ ಬೇಕು. ಆ ಬಗ್ಗೆ ತಿಳಿಯುವ ಹಂಬಲ ಇರಬೇಕು.ಇದ್ಯಾ ವುದು ಇಲ್ಲದೆ `ಹುಚ್ಚಮುಂಡಿ ಮದುವೇಲಿ ಉಂಡೋನೆ ಜಾಣ’ ಅನ್ನುವ ರೀತಿ ಆಡಳಿತ ನಡೆದಿದೆ. ಹಿಂದೆ ಕೆ.ಬಿ. ಕೋಳಿವಾಡ, ವಿ.ಎಸ್. ಕರ್ಜಗಿ, ಜಿ. ಶಿವಣ್ಣನಂತಹ ಪ್ರಬುದ್ಧರು ಗುಣಮಟ್ಟದ ಆಡಳಿತ ನಡೆಸಿದ್ದರು. ಆದರೆ ಈಗಿನ ಆಡಳಿತ ಅಪ್ರಬುದ್ಧವಾಗಿದೆ ಎಂದು ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಟೀಕಿಸಿದರು.
ಈ ಬಗ್ಗೆ 34 ಸದಸ್ಯರು ಒಟ್ಟಾಗಿ ಸಹಿ ಮಾಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿವೆ. ಇವುಗಳ ಗುಣಮಟ್ಟದ ತನಿಖೆಯಾಗಬೇಕು ಎಂದು ಲಿಖಿತವಾಗಿ ಮನವಿ ಮಾಡಿದರೂ ಸಹ ಶಾಸಕರು, ಸಚಿವರು, ಸಂಸದರು, ಜಿಲ್ಲಾಡಳಿತ ಸ್ಪಂದಿಸಲಿಲ್ಲ. ನಾವು ಧರಣಿ ಕುಳಿತ ಮೇಲೆ ಅಧಿಕಾರಿಗಳ ಜೊತೆ ಸೇರಿ ಶಾಸಕರು ನೀಡಿದ ಹೇಳಿಕೆ ಹಾಸ್ಯಾ ಸ್ಪದವಾಗಿದೆ ಎಂದು ಸದಸ್ಯರು ಟೀಕಿಸಿದರು.
ಸದಸ್ಯರಾದ ಸುಮಾ ಹುಚ್ಚಗೊಂಡರ, ಸುವರ್ಣ ಸುರಳಿಕೇರಿ ಮಠ, ಶಶಿಧರ ಬಸೇ ನಾಯ್ಕ, ಜಯಶ್ರೀ ಪಿಸೆ, ನೀಲಮ್ಮ ಮಾಕ ನೂರ, ಶೇಖಪ್ಪ ಹೊಸಗೌಡ್ರ, ಪುಟ್ಟಪ್ಪ ಮರಿಯಮ್ಮನವರ, ನಿಂಗಪ್ಪ ಕೋಡಿಹಳ್ಳಿ, ನಾಗೇಂ ದ್ರಸಾ ಪವಾರ ಮತ್ತು ನೂರುಲ್ಲಾ ಖಾಜಿ ಇದ್ದರು.