90 ಸಾವಿರ ಗ್ರಾ.ಪಂ ಸದಸ್ಯರಿಗೂ ತರಬೇತಿ

ಹೊನ್ನಾಳಿ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ

ಹೊನ್ನಾಳಿ, ಡಿ.6- ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಕುಮಾರ್ ಅವರ ಗೆಲುವು ಶತಸಿದ್ದ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ಚೀಲೂರು,ಸವಳಂಗ ಹಾಗೂ ಬೆಳಗುತ್ತಿ ಗ್ರಾಮಗಳಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಅರುಣ್ ಕುಮಾರ್‌ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಉಪಾಧ್ಯಕ್ಷರಿಗೆ ತರಬೇತಿ ನೀಡಿದ್ದು, ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿನ 90 ಸಾವಿರ ಸದಸ್ಯರಿಗೆ ತರ ಬೇತಿ ನೀಡಲಾಗುವುದೆಂದರು. ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಮತ ಇದ್ದು, ನಾವು ಯಾವುದೇ ಬಿಲ್ ಬೇಕಾದರೂ ಪಾಸ್ ಮಾಡಬಹುದು. ಆದರೆ ವಿಧಾನ ಪರಿಷತ್‌ನಲ್ಲಿ ನಮ್ಮದು ಸ್ಪಷ್ಟ ಬಹುಮತ ಇಲ್ಲ, ಹಾಗಾಗಿ ಗೋಹತ್ಯೆ ನಿಷೇಧ ಕಾಯ್ದೆಯ ಬಿಲ್ ವಿಧಾನ ಪರಿಷತ್‍ನಲ್ಲಿ ಪಾಸ್ ಆಗಲಿಲ್ಲ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಡಿ.ಎಸ್.ಅರುಣ್ ಮಾತ ನಾಡಿದರು.  ಪಕ್ಷದ ಮುಖಂಡ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ್ರು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ನೆಲಹೊನ್ನೆ ಮಂಜುನಾಥ್, ಅರಕೆರೆ ನಾಗರಾಜ್, ಶಾಂತರಾಜ್ ಪಟೇಲ್, ಟಿ.ಪಿ. ಶಿವಾನಂದ್, ಎಸ್.ಪಿ. ರವಿಕುಮಾರ್, ಅಜಯ್ ರೆಡ್ಡಿ, ಕುಬೇರಪ್ಪ ಸೇರಿದಂತೆ ಮತ್ತಿತರಿದ್ದರು.

error: Content is protected !!