ಡಿ.ಆರ್.ಡಿ.ಓ ವಿಜ್ಞಾನಿ ಮಂಜುನಾಥ
ದಾವಣಗೆರೆ, ಡಿ. 6- ವಿಮಾನ, ರೋಬೋಗಳಿಂದ ಹಿಡಿದು ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆಯಲ್ಲಿ ಮೆಕ್ಯಾನಿಕಲ್‌ನಲ್ಲಿ ಉದ್ಯೋಗಗಳಿದ್ದು, ಮೆಕ್ಯಾನಿಕಲ್ ಇಂಜಿನಿಯರ್‌ಗಳಿಗೆ ಉಜ್ವಲ ಭವಿಷ್ಯವಿದೆ. ಸಾರ್ವಜನಿಕ ಸಾಮ್ಯದ ಸರ್ಕಾರಿ ಕೈಗಾರಿಕೆಗಳಲ್ಲಿ ಉದ್ಯೋಗಗಳು ಲಭಿಸುತ್ತವೆ ಎಂದು ಡಿಆರ್‌ಡಿಓ ವಿಜ್ಞಾನಿ ಮಂಜುನಾಥ ತಿಳಿಸಿದರು.
ನಗರದ ಬಿಐಇಟಿಯಲ್ಲಿ ನಡೆದ ಮೆಕ್ಯಾನಿಕಲ್ ವಿದ್ಯಾರ್ಥಿ ವೇದಿಕೆಯ 2021ನೇ ಸಾಲಿನ ಚಟುವಟಿಕೆಗಳು ಮತ್ತು ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಜಿನಿಯರ್‌ಗಳು ವಿಮಾನ, ಉಪಗ್ರಹಗಳನ್ನು ತಯಾರಿಸುತ್ತಾರೆ. ಚಂದ್ರಯಾನ, ಮಂಗಳಯಾನಕ್ಕೆ ಉಪಗ್ರಹಗಳನ್ನು ಉಡಾಯಿಸುತ್ತಾರೆ ಎಂದರು.
ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ತಂತ್ರಜ್ಞಾನದ ಕೊರತೆಯಿಂದ ಬೇರೆ ದೇಶದಿಂದ ವಿಮಾನ, ರಾಕೆಟ್, ಹಡಗುಗಳನ್ನು ತರಿಸಿಕೊಳ್ಳುತ್ತಿದ್ದೆವು. ಇಂದು ನಮ್ಮ ದೇಶದಲ್ಲೇ ಸ್ವಂತ ಶಕ್ತಿಯಿಂದ ಎಲ್ಲ ತಯಾರಾಗುತ್ತಿವೆ ಎಂದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಕೆ. ಸದಾಶಿವಪ್ಪ, ವಿಭಾಗದ ಮುಖ್ಯಸ್ಥ ಡಾ. ಜಿ. ಮಾನವೇಂದ್ರ, ಮೆಕ್ಯಾನಿಕಲ್ ವಿದ್ಯಾರ್ಥಿ ವೇದಿಕೆಯ ಸಂಯೋಜಕ ಡಿ.ಇ. ಉಮೇಶ್, ಟಿ.ಆರ್. ಮೋಹನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.