ರಾಣೇಬೆನ್ನೂರಿನಲ್ಲಿ ಜಗದ್ಗುರು ರಂಭಾಪುರಿ ಶ್ರೀ
ರಾಣೇಬೆನ್ನೂರು, ಡಿ. 6- ಸತ್ಯ ಮನುಷ್ಯನನ್ನ ಬದಲಿಸ ಬಹುದು, ಸತ್ಯವನ್ನು ಬದಲಿಸಲಾ ಗದು. ಸತ್ಯ, ಸದ್ಭಾವನೆಯಿಂದ ಜಗದಲ್ಲಿ ಶಾಂತಿ ಸಮೃದ್ದಿ ಪ್ರಾಪ್ತ ವಾಗಲಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಸ್ವಾಮೀಜಿ ಉಪದೇಶಿಸಿದರು.
ನಗರದ ಶನೇಶ್ಚರ ಮಂದಿರದಲ್ಲಿ ಲೋಕ ಕಲ್ಯಾಣಾರ್ಥ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮನುಕುಲ ಸದ್ಭಾವನಾ ಪ್ರಶಸ್ತಿ ವಿತರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಮಾನವ ಜೀವನದ ಶ್ರೇಯಸ್ಸಿಗಾಗಿ ಧರ್ಮಾಚರಣೆ ಅತ್ಯಂತ ಅವಶ್ಯಕ, ಆ ನಿಟ್ಟಿನಲ್ಲಿ ಶನೇಶ್ಚರ ಮಂದಿರದಲ್ಲಿ 384 ದಿನಗಳ ಕಾಲ ನಿರಂತರ ಕಾರ್ಯಕ್ರಮ ನಡೆದುಕೊಂಡು ಬಂದು ದಾಖಲೆ ನಿರ್ಮಿಸಿದೆ.
ಗ್ರಹಗಳಲ್ಲಿ ಗುರು ಮತ್ತು ಶನಿ ಅತ್ಯಂತ ಪ್ರಭಾವ ಶಾಲಿ ಗ್ರಹಗಳು. ಶನಿ ಜೀವನದಲ್ಲಿ ಪ್ರವೇಶಿಸಿದರೆ 7 ವರ್ಷಗಳ ಕಾಲ ಕಾಡಿಸದೇ ಬಿಡಲಾರ. ಗುರು ದೃಷ್ಟಿ ಇದ್ದರೆ ಬರುವ ಕಷ್ಟಗಳು ಕರಗಲಿವೆ. ಇವೆರಡೂ ಗ್ರಹಗಳ ಕೃಪಾ ಕಾರುಣ್ಯಕ್ಕಾಗಿ ಸದಾ ಮನುಷ್ಯ ಹಂಬಲಿಸುತ್ತಾರೆ.
ಓದಿದ ಪಾಠಗಳನ್ನು ಮನುಷ್ಯ ಮರೆಯಬಹುದು, ಆದರೆ ಜೀವನದಲ್ಲಿ ಕಲಿತ ಪಾಠಗಳನ್ನು ಮರೆಯಲು ಸಾಧ್ಯವಿಲ್ಲ. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ, ಸತ್ಯದ ಜೊತೆ ದೈವ ಶಕ್ತಿ ಇರುತ್ತದೆ. ಸಿಹಿ ಹಣ್ಣು ಕೊಡುವ ಮರಕ್ಕೆ ಕಲ್ಲು ಹೊಡೆಯುವರು ಹೆಚ್ಚು. ಹಾಗೆಯೇ ಉಪಕಾರ ಮಾಡುವವರಿಗೆ ಕಷ್ಟ, ನಿಂದನೆ, ಅಪವಾದಗಳು ಬರುತ್ತವೆ. ಕಷ್ಟಗಳು ಸುಖಾಗಮನದ ಹೆಗ್ಗುರುತು ಎಂದು ತಿಳಿದು ಬಾಳಿದರೆ, ಜೀವನದಲ್ಲಿ ಉತ್ಕರ್ಷತೆ ಹೊಂದಲು ಸಾಧ್ಯವಾಗುತ್ತದೆ. ಶನೇಶ್ಚರ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾಡಿದ ಎರಡು ಮಹಾಮಂಡಲ ಪೂಜೆಯನ್ನು ಶನೈಶ್ಚರನಿಗೆ ಸಲ್ಲಿಸಿ ಭಕ್ತ ಸಂಕುಲ ಶ್ರದ್ಧೆ, ವಿಶ್ವಾಸಕ್ಕೆ ಪಾತ್ರರಾಗಿರು ವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಜಗದ್ಗುರುಗಳು ನುಡಿದರು.
ತಾವು ಕೈಗೊಂಡ ಧಾರ್ಮಿಕ ಕಾರ್ಯಕ್ರಮಗಳಿಗೆ ಒಂದು ವರ್ಷದಿಂದ ಸಹಾಯ, ಸಹಕಾರ ನೀಡಿ ತಮ್ಮ ಮನೋಬಲ ಹೆಚ್ಚಿ ಸಿದ ಹರ ಗುರು ಚರಮೂರ್ತಿ ಗಳಿಗೆ, ಜನ ಪ್ರತಿನಿಧಿಗಳಿಗೆ, ಉದ್ಯ ಮಿಗಳಿಗೆ, ರೈತರಿಗೆ, ದಾನಿಗಳಿಗೆ ಅತ್ಯಂತ ವಿನಮ್ರತೆಯಿಂದ ಪೀಠಾ ಧಿಪತಿ ಶ್ರೀ ಶಿವಯೋಗಿ ಶಿವಾಚಾರ್ಯರು ಅಭಿನಂದನೆ ಜೊತೆಗೆ ಸ್ಮರಣೆ ಮಾಡಿಕೊಂಡರು.
ಸಮಾರಂಭವನ್ನು ಶಾಸಕ ಅರುಣಕುಮಾರ್ ಪೂಜಾರ ಉದ್ಘಾಟಿಸಿದರು. ವೇದಿಕೆಯಲ್ಲಿ ವಿವಿಧ ಮಠಾಧೀಶರು, ಮಾಜಿ ಶಾಸಕ ಯು.ಬಿ. ಬಣಕಾರ, ಸಮಿತಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣ, ಚೋಳಪ್ಪ ಕಸವಾಳ, ರವಿ ಪಾಟೀಲ, ಬಸವರಾಜ ಸವಣೂರ, ಮಂಜುನಾಥ ಕುನ್ನೂರ, ಡಾ. ಬಸವರಾಜ ಕೇಲಗಾರ, ಕೊಟ್ರೇಶ್ ಎಮ್ಮಿ ಮತ್ತಿತರರಿದ್ದರು.