ಹರಪನಹಳ್ಳಿ, ಡಿ.6- ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿಜ್ಞಾ ನವನ್ನು ಪ್ರಯೋಗಗಳ ಮೂಲಕ ಕಲಿಸು ವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಬೆಳೆಯುತ್ತದೆ ಎಂದು ಎ.ಡಿ.ಬಿ ಕಾಲೇಜಿನ ಪ್ರಾಂಶು ಪಾಲ ಡಾ. ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಎ.ಡಿ.ಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಎ.ಡಿ.ಬಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವಿಭಾಗದ ಸಹಯೋಗದೊಂದಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಸಾಮಾನ್ಯ ವಿಜ್ಞಾನದ ಸರಳ ಪ್ರಯೋಗಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ಹೆಚ್ಚು ಸರಳ ಪ್ರಯೋಗಗಳನ್ನು ತರಗತಿಗಳಲ್ಲಿ ಮಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಸರಳ ವಿಷಯವನ್ನಾಗಿ ಬೋಧಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ವಿಜ್ಞಾನ ಆಸಕ್ತ ವಿಷಯವಾಗುವಂತೆ ಮಕ್ಕಳಿಗೆ ಸರಳ ರೀತಿಯಲ್ಲಿ ತಿಳಿಸುವ ಅವಶ್ಯಕತೆ ಇದೆ ಎಂದರು.
ಕ್ಷೇತ್ರ ಶಿಕ್ಷಾಣಾಧಿಕಾರಿ ಎಸ್.ಎಂ. ವೀರಭಧ್ರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನವು ಕೌತು ಕದ ವಿಷಯವಾಗಿದ್ದು, ಮಕ್ಕಳಲ್ಲಿ ಆಸಕ್ತಿ ಯುತವಾಗಿ ಕಲಿಯುವಂತೆ ಪ್ರಾಯೋ ಗಿಕ ಜ್ಞಾನವನ್ನು ನೀಡುವುದು ಅವಶ್ಯ ವಾಗಿದ್ದು, ಈ ವಾರ 12 ಕ್ಲಸ್ಟರ್‌ಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತ ದಲ್ಲಿ ಮುಂದಿನ ವಾರ ಉಳಿದ 12 ಕ್ಲಸ್ಟರ್‌ಗಳ ಶಿಕ್ಷಕರಿಗೆ ಸಾಮಾನ್ಯ ವಿಜ್ಞಾ ನದ ಸರಳ ಪ್ರಯೋಗಗಳ ಕಾರ್ಯಾ ಗಾರ ಮಾಡಲಾಗುತ್ತದೆ ಎಂದರು.
ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ್ ಮಾತನಾಡಿ, ಕಾಲೇಜಿನ ಪ್ರಯೋಗಾಲಯಗಳಲ್ಲಿ ಪ್ರಯೋಗಗ ಳನ್ನು ಕೈಗೊಂಡು ಇಲ್ಲಿ ಕಲಿತ ವಿಷಯವನ್ನು ತರಗತಿಯಲ್ಲಿ ಸರಳ ಪ್ರಯೋಗಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಆಸಕ್ತಿ ಕೆರಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಈ ವೇಳೆ ಎ.ಡಿ.ಬಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವಿಭಾಗದ ಮುಖ್ಯಸ್ಥ ಡಾ. ಸಿದ್ದಲಿಂಗಮೂರ್ತಿ, ಕ್ಷೇತ್ರ ಸಮನ್ವಯಾಧಿಕಾರಿ ಹುಸೇನ್ ಪೀರ್, ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಪ್ಪ ನಿಲೋಗಲ್, ಡಿ.ವಿ.ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೊಟ್ರಬಸಪ್ಪ, ಬಿಆರ್‌ಪಿಗಳಾದ ಅಣ್ಣಪ್ಪ, ಮಲ್ಲಿಕಾರ್ಜುನ್ ಡಿ, ಶಿಕ್ಷಣ ಸಂಯೋಜಕ ವೆಂಕಟೇಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್, ಅಬ್ದುಲ್ ಸಲಾಂ, ನಾಗರಾಜ್, ರಂಗಸ್ವಾಮಿ, ಶ್ರೀಕಾಂತ್, ವೀರೇಶ್, ಸಂಪನ್ಮೂಲ ವ್ಯಕ್ತಿಗಳಾದ ಶಶಿಕಲ ಡಿ, ಉಮಾದೇವಿ ಅಧಿಕಾರ್ ಸೇರಿದಂತೆ, ಇತರರು ಇದ್ದರು.