ದೊಡ್ಡಬಾತಿಯಲ್ಲಿ ರಾಜ್ಯೋತ್ಸವ

ದಾವಣಗೆರೆ, ನ. 30- ದೊಡ್ಡಬಾತಿಯ ಗುಡ್ಡದ ಮೇಲಿನ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಿತಿ, ಚುಟುಕು ಸಾಹಿತ್ಯ ಪರಿಷತ್, ಜಿಲ್ಲಾ ಹಾಗೂ ಹರಿಹರ ತಾಲ್ಲೂಕು ಸಿರಿಗನ್ನಡ ವೇದಿಕೆ, ತೆಲಗಿಯ ಸ್ಫೂರ್ತಿ ಪ್ರಕಾಶನ, ಅಣಬೇರಿನ ಭಾವಸಿರಿ ಪ್ರಕಾಶನ ಇವರ ಸಹಯೋಗದಲ್ಲಿ 15ನೇ ವರ್ಷದ ಕನ್ನಡ ರಾಜ್ಯೋತ್ಸವ, ಉಪನ್ಯಾಸ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಎಚ್.ರಾಜಶೇಖರ ಗುಂಡಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.   ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಬಾತಿ ಬಸವರಾಜ್, ಭಾನುವಳ್ಳಿಯ ಯು.ಕೆ. ಅಣ್ಣಪ್ಪ,  ದೊಡ್ಡಬಾತಿ ಗ್ರಾಪಂ ಅಧ್ಯಕ್ಷ ಎಚ್.ಕೆ.ಹನುಮಂತಪ್ಪ, ಸದಸ್ಯರಾದ ಕೆ.ಜಿ.ಉಮೇಶ್, ಡಿ.ಆರ್.ವೀರೇಶ್, ಡಾ.ಮಹೇಶ್, ಜೆ.ವಸುಪಾಲಪ್ಪ, ಪಿ.ಎ.ನಾಗರಾಜ, ಸಾಹಿತಿಗಳಾದ ಬಾತಿ ಎಸ್.ಕೃಷ್ಣ, ವೀರಭದ್ರಪ್ಪ ತೆಲಗಿ, ಶಿವಯೋಗಿ ಹಿರೇಮಠ, ಓಂಕಾರಯ್ಯ ತವನಿಧಿ, ಬಿ.ಮಹಾಂತೇಶ ನಿಟ್ಟೂರು, ಬಿ.ಎಲ್.ಗಂಗಾಧರ ನಿಟ್ಟೂರು, ಕುಂದೂರು ಮಂಜಪ್ಪ ಸೇರಿದಂತೆ ಇತರರು ಇದ್ದರು. 

ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಗಳಿಸಿದ ಕೆ.ಜೆ. ಚೈತ್ರಾ, ದ್ವಿತೀಯ ಪಿಯುಸಿಯ ಕನ್ನಡ ಭಾಷೆಯಲ್ಲಿ 100 ಕ್ಕೆ 100 ಅಂಕ ಗಳಿಸಿದ ಬಿ.ಎಚ್. ಸಂಗೀತಾರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

error: Content is protected !!