ದಾವಣಗೆರೆ, ನ.30- ಶೋಷಿತ ವರ್ಗದ ದನಿ, ಹಿಂದುಳಿದವರ ನಾಯಕ ಬಾಡದ ಆನಂದರಾಜು ಅವರ 49ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ವಿರಕ್ತ ಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಬಸವಣ್ಣನವರ ವಚನಗಳಿಂದ ಆಶೀರ್ವದಿಸಿ, ಸನ್ಮಾನಿಸಿ, ಗೌರವಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಆನಂದರಾಜು ಅವರು ಸಾಮಾಜಿಕವಾಗಿ ಕಾರ್ಯ ಮಾಡುವ ವ್ಯಕ್ತಿಗಳಲ್ಲಿ ವಿಭಿನ್ನರಾಗಿದ್ದಾರೆ. ಯಾರು ಸಮಾಜದಲ್ಲಿ ಅಶಕ್ತರಾಗಿದ್ದಾರೋ ಅಂತವರ ಪರವಾಗಿ ಹೋರಾಟ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು. ಯಾವುದೇ ಅಧಿಕಾರ ಆಡಳಿತ ಇಲ್ಲದಿದ್ದರೂ ತಮ್ಮ ವೈಯಕ್ತಿಕ ಶಕ್ತಿಯಿಂದ ಸೇವೆ ಮಾಡುತ್ತಿದ್ದಾರೆ. ಕೊರೊನಾ ಎಂಬ ಸಂಕಷ್ಟದಲ್ಲಿ ದಣಿವರಿಯದೇ ಬಡವರ ಸೇವೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜ್ ಲೋಕಿಕೆರೆ, ಮಾಜಿ ಮಹಾಪೌರ ಬಿ.ಜಿ.ಅಜಯ್ ಕುಮಾರ್ ಮತ್ತಿತರರು ಮಾತನಾಡಿ, ಆನಂದರಾಜು ಅವರಿಗೆ ಶುಭ ಕೋರಿದರು.
ಮಾಜಿ ಉಪ ಮಹಾಪೌರರಾದ ಶ್ರೀಮತಿ ಸೌಮ್ಯ ನರೇಂದ್ರಕುಮಾರ್, ಎಸ್.ಪಿ.ಶ್ರೀನಿವಾಸ್, ಎಸ್.ಮುರುಳಿ ಯಾದವ್, ಮಹಾನಗರ ಪಾಲಿಕೆ ಸದಸ್ಯ ಮಂಜುನಾಯ್ಕ್, ಮಹಿಳಾ ಮುಖಂಡರಾದ ಶ್ರೀಮತಿ ಸಲೀನಾ, ರಾಜು ಮಠದ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.