ವಿವೇಕ್-ಮೆಹುಲ್ ಜೋಡಿಗೆ ಸಿಎಂ ಸೇರಿ ಗಣ್ಯರ ಶುಭ ಹಾರೈಕೆ

ದಾವಣಗೆರೆ, ನ. 30 – ಹೆಸರಾಂತ ಜವಳಿ ಉದ್ಯಮ ವಾದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ನ ಬಿ.ಸಿ. ಚಂದ್ರಶೇಖರ್ ಅವರ ಪುತ್ರ ಬಿ.ಸಿ. ವಿವೇಕ್ ಅವರ ವಿವಾಹವು ಮೆಹುಲ್ ಅವರೊಂದಿಗೆ ಸೋಮವಾರ ನಗರದ ಎಸ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿತು. 

ಈ ಶುಭ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಧು-ವರರಿಗೆ ಆಶೀರ್ವದಿಸಿದರು. 

ಸಚಿವರುಗಳಾದ ಶಂಕರ್ ಪಾಟೀಲ್ ಮುನೇನ ಕೊಪ್ಪ, ಸಿ.ಸಿ. ಪಾಟೀಲ್, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಬಿ.ಸಿ. ಪಾಟೀಲ್, ಲೋಕಸಭಾ ಸದಸ್ಯರುಗ ಳಾದ ಜಿ.ಎಂ. ಸಿದ್ದೇಶ್ವರ, ಶಿವಕುಮಾರ ಉದಾಸಿ, ಶಾಸಕರುಗಳಾದ ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಅರುಣ ಕುಮಾರ್ ಪೂಜಾರ್, ವಿ.ಪಿ. ಬಳ್ಳಾರಿ, ಅರವಿಂದ ಬೆಲ್ಲದ್, ಪಿ.ಟಿ. ಪರಮೇಶ್ವರನಾಯ್ಕ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಉದ್ಯಮಿಗಳಾದ ಎಸ್.ಎಸ್. ಗಣೇಶ್, ಜಿ.ಎಂ. ಪ್ರಸನ್ನಕುಮಾರ್, ಜಿ.ಎಂ. ಲಿಂಗರಾಜ್, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಂಚಮ ಸಾಲಿ ಸಮಾಜದ ಮುಖಂಡರುಗಳಾದ ಬಸವರಾಜ ದಿಂಡೂರು, ಬಾವಿ ಬೆಟ್ಟಪ್ಪ, ಬಿ.ನಾಗನಗೌಡ, ಜಿ.ಪಿ. ಪಾಟೀಲ್, ಪೂಜಾರ್ ಚಂದ್ರಶೇಖರ್, ವಿ.ಆರ್.ಎಲ್. ಸಮೂಹ ಸಂಸ್ಥೆ ಮಾಲೀಕರಾದ ವಿಜಯ ಸಂಕೇಶ್ವರ ದಂಪತಿ, ಕೆ.ಎಲ್.ಇ. ಸೊಸೈಟಿಯ ಅಧ್ಯಕ್ಷ ಪ್ರಭಾಕರ್ ಕೋರೆ,  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್ ಸೇರಿದಂತೆ   ಅನೇಕ ಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.

ಬಿಎಸ್‌ಸಿ ಮಾಲೀಕರುಗಳಾದ ಬಿ.ಸಿ. ಉಮಾಪತಿ, ಬಿ.ಸಿ. ಶಿವಕುಮಾರ್, ಬಿ.ಯು. ಚಂದ್ರಶೇಖರ್, ಬಿ.ಎಸ್. ಮೃನಾಲ್, ಬಿ.ಸಿ. ವೇದ್ ಹಾಗೂ ಕುಟುಂಬದವರು ಅತಿಥಿಗಳನ್ನು ಸ್ವಾಗತಿಸಿದರು.

error: Content is protected !!