ತಹಶೀಲ್ದಾರ್ ಗಿರೀಶ್ ನೇತೃತ್ವದ ತಂಡ ಜಾಗೃತಿ
ದಾವಣಗೆರೆ, ನ.29- ಲಸಿಕೆ ಪಡೆಯದೇ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಲಸಿಕೆ ಹಾಕಿರುವ ಘಟನೆ ತಾಲ್ಲೂ ಕಿನ ಕೈದಾಳೆ ಗ್ರಾಮದಲ್ಲಿ ನಡೆದಿದೆ. ಕೂಲಿ ಕಾರ್ಮಿಕರಾದ ಲಲಿತಮ್ಮ (70), ಕರಿಯಪ್ಪ (30), ಮಲ್ಲಿಕಾರ್ಜುನ (29), ಮಸಿಯಪ್ಪ (29) ಅವರು ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಕಬ್ಬು ಕಟಾವು ಮಾಡುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಗಿರೀಶ್ ನೇತೃತ್ವದ ತಂಡ ಭೇಟಿ ನೀಡಿ ಅವರಿಗೆ ಮನವೊಲಿಸಿ ಲಸಿಕೆ ಹಾಕಿಸಿತು.