ರಾಣೇಬೆನ್ನೂರು ಕುರುಹಿನಶೆಟ್ಟಿ ಸಮಾಜದ ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ
ರಾಣೇಬೆನ್ನೂರು, ಆ.24- ಮಕ್ಕಳು ಶೈಕ್ಷಣಿಕ ಪ್ರಗತಿ ಹೊಂದಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅರುಣಕುಮಾರ ಪೂಜಾರ ಹೇಳಿದರು.
ಸ್ಥಳೀಯ ಮಾರುತಿ ನಗರದ ನೀಲಕಂಠೇಶ್ವರ ದೇವಸ್ಥಾನ ಸಭಾ ಭವನದಲ್ಲಿ ನೂಲ ಹುಣ್ಣಿಮೆ ಪ್ರಯುಕ್ತ ತಾಲ್ಲೂಕು ಕುರುಹಿನಶೆಟ್ಟಿ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಬೈಕ್ ರಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರರಿಗೆ ಸರ್ಕಾರ ಅನೇಕ ಯೋಜನೆ ಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಅದನ್ನು ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಕುರುಹಿನಶೆಟ್ಟಿ ಸಮಾಜದ ಜನರು ಒಗ್ಗೂಡಿ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜ ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ನಗರದಲ್ಲಿ ನೇಕಾರ ಕಾಲೋನಿ ಮಾಡಲು ಸೇರಿದಂತೆ ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದೀರಿ. ಅದನ್ನು ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಗೌರವಾಧ್ಯಕ್ಷ ಹನುಮಂತಪ್ಪ ಕಾಕಿ, ನಗರಸಭೆ ಸದಸ್ಯ ಪಾಂಡುರಂಗ ಗಂಗಾವತಿ, ಶೋಭಾ ಹೊಸಪೇಟೆ, ರೇಣುಕಾ ಅಮಾಸಿ, ವಿರುಪಾಕ್ಷಪ್ಪ ಬೆಳಕೇರಿ, ದ್ಯಾ ಮಣ್ಣ ಸುಂಕಾಪುರ, ರಾಮಣ್ಣ ಕಾಕಿ, ವೆಂಕಟೇಶ ಕಾಕಿ, ನಾಗರಾಜ ಹೊಸಪೇಟೆ, ಪ್ರಕಾಶ ಕಾಕಿ, ಗುರುರಾಜ ಗಂಗಾವತಿ, ಎಂ. ಚನ್ನಪ್ಪ, ಗಣೇಶ ಕನ್ನಕಿ ಇನ್ನಿತರರಿದ್ದರು.