ನೈಜ ಭಕ್ತರಾಗದಿದ್ದಲ್ಲಿ ದೇವಾಲಯ ಕಟ್ಟುವುದು ನಿರರ್ಥಕ

ಜಗಳೂರು ತಾಲ್ಲೂಕಿನ ಕಾರ್ಯಕ್ರಮದಲ್ಲಿ ಭೋವಿ ಗುರು ಪೀಠದ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ

ಜಗಳೂರು, ಆ.19- ನೂರು ದೇವಾಲಯ ಕಟ್ಟಿ ಪ್ರವೇಶಿಸುವುದಕ್ಕಿಂತ, ದೇವಾಲಯ ಪ್ರವೇಶಿಸುವ ನೂರಾರು ದೇಹಗಳು ದೇವಾಲಯವಾಗಿ ಪರಿವರ್ತನೆಗೆೋಳ್ಳಬೇಕು. ಭಕ್ತರು ನೈಜ ಭಕ್ತರಾಗದಿದ್ದಲ್ಲಿ ದೇವಾಲಯ ಕಟ್ಟುವುದು ನಿರರ್ಥಕ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.  

ತಾಲ್ಲೂಕಿನ ಬೆಂಚಿಕಟ್ಟೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ದೇವಾಲಯ ಪ್ರವೇಶಿಸುವ ದೇಹಗಳು ದುರ್ಗುಣ, ದುಶ್ಚಟ, ದುರ್ಬುದ್ಧಿ ತ್ಯಜಿಸಿ ಸದ್ಗುಣ, ಸದ್ಬುದ್ಧಿ, ಸದಾಚಾರ ಮೈಗೂಡಿಸಿಕೊಳ್ಳಲಿ. ತನು, ಮನ, ಭಾವ ಶುದ್ಧೀಕರಣ, ಅಂತರಂಗ – ಬಹಿರಂಗ ಶುದ್ಧೀಕರಣದೊಂದಿಗೆ ಮಾನವ ಮಹಾದೇವನಾಗಬೇಕೆಂದು ಹೇಳಿದರು. 

ಜ್ಯೋತಿ ಮುಟ್ಟಿದ ಬತ್ತಿಯೆಲ್ಲ ಜ್ಯೋತಿಯಂತಪ್ಪುವಯ್ಯ ಎಂಬಂತೆ ಆಂಜನೇಯ ಭಕ್ತನು ಭಗವಂತನ ಸ್ಥಾನವನ್ನು ಪಡೆಯಬಹುದು ಎಂಬುದಕ್ಕೆ ಸೂಕ್ತ ನಿದರ್ಶನ ಎಂದರು. ಚಿತ್ರದುರ್ಗ ಭೋವಿ ಗುರುಪೀಠದ ವಿದ್ಯಾಸಂಸ್ಥೆಯ ನಿರ್ದೇಶಕ ಡಿ.ಸಿ. ಮೋಹನ್, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹಾವೇರಿ ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ರವಿ ಪೂಜಾರಿ, ಡಾ. ನಾಗೇಶ್‌, ತಾಲ್ಲೂಕು ಅಧ್ಯಕ್ಷರಾದ ಪಿ.ದೇವರಾಜ್‌ ಮಾತನಾಡಿದರು. 

ದಾನಿಗಳಾದ ಕುರುಬರಹಟ್ಟಿ ತಿಪ್ಪೇಶ, ಬಿ.ಜಿ.ರಾಜಪ್ಪ, ಉಪನ್ಯಾಸಕ ದ್ಯಾಮಪ್ಪ, ಉಪನ್ಯಾಸಕ ಕೆ.ಎಚ್‌. ವೆಂಕಟೇಶ್‌, ಗ್ರಾ.ಪಂ. ಮಾಜಿ ಸದಸ್ಯ ದ್ಯಾಮಪ್ಪ, ವಿರೂಪಾಕ್ಷಪ್ಪ ಆರ್‌, ಪಿ. ಬಸವರಾಜ್‌ ಅವರುಗಳನ್ನು ಸನ್ಮಾನಿಸಲಾಯಿತು. 

ಸಮಾರಂಭದಲ್ಲಿ ಎಲ್‌. ಜಗನ್ನಾಥ, ಪಿ.ಟಿ. ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಂಜಿನಪ್ಪ, ಪಿ.ಎಲ್‌.ಡಿ. ಬ್ಯಾಂಕ್‌ ಮಾಜಿ  ಅಧ್ಯಕ್ಷ ಪರಮೇಶ್ವರಪ್ಪ, ಸತ್ಯಮ್ಮ ತಿಮ್ಮಪ್ಪ, ಭಜನೆ ಹಿರಿಯರಾದ ಕುಮಾರಸ್ವಾಮಿ, ನವಲಪ್ಪ, ಬಿ.ಎಸ್‌. ರಾಜಪ್ಪ, ವಿರೂಪಾಕ್ಷಪ್ಪ, ನಾಗೇಶಪ್ಪ, ಹೆಬ್ಬಾಳ ನಾಗರಾಜಪ್ಪ, ಪೂಜಾರಿ ದ್ಯಾಮೇಶ್‌, ರಂಗಪ್ರವೇಶ ಯಲ್ಲಪ್ಪ, ಟಿ.ವೀರಭದ್ರಪ್ಪ, ಬಿ.ಇ.ಅಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!