ಶಿಸ್ತು – ಸ್ವಚ್ಛತೆ ರೂಢಿಸಿಕೊಳ್ಳಬೇಕು

ಹರಪನಹಳ್ಳಿ : ತರಳಬಾಳು ಶಾಲೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರುಚಿತಾ

ಹರಪನಹಳ್ಳಿ, ನ.18-  ಮಕ್ಕಳು ಶಿಸ್ತು ಮತ್ತು ಸ್ವಚ್ಛ ತೆಯನ್ನು ಕಾಪಾಡಿಕೊಂಡು ವಿದ್ಯಾಭ್ಯಾಸ ಮಾಡಿದರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದು 10ನೇ ತರಗತಿ ವಿದ್ಯಾರ್ಥಿನಿ ಕು. ಬಿ. ರುಚಿತಾ ಪ್ರತಿಪಾದಿಸಿದರು.

 ಪಟ್ಟಣದ ತರಳಬಾಳು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರುಚಿತಾ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಶಾಲೆಯ ವಿದ್ಯಾರ್ಥಿಗಳಾದ ಬಿ.ಕೆ. ಗಾಯತ್ರಿ, ಅಮೃತಾ  ಭಾಗವಹಿಸಿ ಮಕ್ಕಳ ಚಟುವಟಿಕೆ ಮತ್ತು ಜವಾಹರ್‍ಲಾಲ್‌ ನೆಹರೂರವರ ಜೀವನ ಕಥೆಯನ್ನು ತಿಳಿಸಿದರು. 

ಶಾಲಾ ಕಾರ್ಯದರ್ಶಿ ಕುಸುಮಾ ಜಗದೀಶ್ ಮಕ್ಕಳಿಗೆ ಹಿತ ನುಡಿದರು. ಶಿಕ್ಷಕ ಎಸ್. ನಂಜಪ್ಪ ಮಾತನಾಡಿ, ಪಾತರಗಿತ್ತಿ ಕೇವಲ 14 ದಿನ ಬದುಕಿರುತ್ತದೆ. ಆದರೆ ಅದು ಎಂದೂ ದುಃಖಿಸದೇ ಸಂತೋಷದಿಂದ ಜೀವನ ಸಾಗಿಸುತ್ತದೆ. ಅದೇ ರೀತಿ ತಾವುಗಳು ಪ್ರತಿದಿನ ಸಂತೋಷದಿಂದ ನಗು ನಗುತ್ತಾ ಇದ್ದು ವಿದ್ಯಾಭ್ಯಾಸ ಮಾಡಬೇಕು ಎಂದರು. ವಿದ್ಯಾರ್ಥಿನಿಯರಾದ ನಂದಿನಿ  ಹಾಗೂ ಸೋನು ಬೇಗಂ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ವಂದಿಸಿದರು.

error: Content is protected !!