ಹರಪನಹಳ್ಳಿ : ತ್ಯಾಗದ ಮತ್ತೊಂದು ಹೆಸರು ಹೆಣ್ಣು

ಈಶ್ವರೀಯ ವಿವಿಯ ಬಿ.ಕೆ. ಸುಮಂಗಲ

ಹರಪನಹಳ್ಳಿ, ಮಾ.29- ತ್ಯಾಗದ ಮತ್ತೊಂದು ಹೆಸರು ಹೆಣ್ಣು. ಹೆಣ್ಣಿಗೆ ಏಕಾಗ್ರತೆ, ದೃಢತೆ ಹೆಚ್ಚಿದೆ. ಹೆಣ್ಣು ಚಟಗಳಿಗೆ ದಾಸಿಯಾಗುವುದಿಲ್ಲ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ  ಬಿ.ಕೆ. ಸುಮಂಗಲ ಹೇಳಿದರು.

ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಶ್ರೀಮತಿ ಬಸಮ್ಮ ಸಭಾ ಭವನದಲ್ಲಿ ಏರ್ಪಡಿಸಿದ್ದ  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಜಯ ನಗರ ಜಿಲ್ಲಾ ಪ್ರಥಮ ಮಹಿಳಾ ಕವಿಗೋಷ್ಠಿ, ವಿಚಾರ ಸಂಕಿರಣ ಮತ್ತು  ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಬಟ್ಟೆ ಸಂಸ್ಕೃತಿಯನ್ನು ಪೋಷಕರು ಕಲಿಸಬೇಕು. ಹೆಣ್ಣಿನ ರಕ್ಷಣೆಯನ್ನು ಹೆಣ್ಣೇ ಮಾಡಬೇಕು ಎಂದರು. 

ಉಪನ್ಯಾಸಕಿ  ಸುಧಾ ಚಿದಾನಂದ ಗೌಡ ಮಾತನಾಡಿ ಹೆಣ್ಣು ಹೋರಾಟದ ಮೂಲಕ ಹಕ್ಕನ್ನು ಪಡೆದುಕೊಳ್ಳಬೇಕು. ಭಾರತದ ಸಂವಿಧಾನ ಮಹಿಳೆಯರಿಗೆ ಎಲ್ಲಾ ಹಕ್ಕುಗಳನ್ನು ಕೊಟ್ಟಿದೆ. ಮಹಿಳೆಯರ ಅನೇಕ ಘಟನೆಗಳಿಗೆ ಮೌನವೇ ಭಾಷೆ ಯಾಗಿದೆ. ಭಗೀರಥಿ ಪ.ಪೂ. ಕಾಲೇಜು ಪ್ರಾಚಾರ್ಯೆ ನಿರ್ಮಲ ಶಿವನಗುತ್ತಿ ಮಾತನಾಡಿ, ಸವಾಲುಗಳನ್ನು ಮೆಟ್ಟಿ ನಿಲ್ಲಬೇಕೆಂದು ಆತ್ಮ ಸ್ಥೈರ್ಯ ನೀಡಿದರು. 

ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಿಕ್ಷಕಿ ಸುಭದ್ರ ಮಾಡ್ಲಿಗೇರಿ ಡಾ|| ಪ್ರಿಯಾಂಕ ಅಧಿಕಾರ್, ಮಾತನಾಡಿದರು. ಸಪ್ನ ಮಲ್ಲಿಕಾರ್ಜುನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ವಿಜಯನಗರ ಜಿಲ್ಲಾ ಪ್ರಥಮ ಮಹಿಳಾ ಕವಿಗೋಷ್ಠಿಯಲ್ಲಿ ಪವಿತ್ರ ಬಡಿಗೇರ್, ಟಿಜಿಎಂ ಸುಲೋಚನ, ಜಯಲಕ್ಷ್ಮಿ ಎನ್, ನಾಗ ಮಂಜುಳ, ಡಿ. ಶಶಿಕಲಾ, ಗೀತಾ ಕಬ್ಬಳ್ಳಿ, ಹೆಚ್. ಶಾಂತ, ಹೆಚ್. ಕಮಲಾಕ್ಷಿ, ಓಬಮ್ಮ ಚಿಕ್ಕೇರಿ, ಟಿ. ವೀಣಾ ಕುಮಾರಿ, ಮಮ್ತಾಜ್ ಬೇಗಂ, ಡಾ. ಅಕ್ಷತ ಭಾಗವಹಿಸಿ ಕವನ ವಾಚನ ಮಾಡಿದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಜಲಿ ಬೆಳಗಲ್, ಅಂಗಡಿ ನಾಗವೇಣಿ, ಪುಷ್ಪಾವತಿ, ಹೆಚ್.ಎಂ. ಸಂಚಿತ., ಎಸ್. ಅಂಬಿಕಾ, ಜಿ. ಸುಧಾರಾಣಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಲ್. ಸಂಗೀತಾ, ಜಿ. ರಂಜಿತಾ, ಲತಾ ರಾಥೋಡ್, ಬಿ.ಆರ್. ದೀಪಾ, ಜಿ. ಗೀತಾ, ಪುಷ್ಪ, ರೋಹಿಣಿ, ಕರಿಬಸಮ್ಮ, ಮೇಧಾವತಿ ಇನ್ನಿತರರಿದ್ದರು.

error: Content is protected !!