ರಾಣೇಬೆನ್ನೂರು, ನ.16- ದೇವಾಂಗ ಧರ್ಮದ ಆಧಾರ ಸ್ಥಂಭವಾದ ದೇವಲ ಮಹರ್ಷಿ ಅವರು ಪರಮಾತ್ಮನ ಚಿತ್‌ಶಕ್ತಿಯಿಂದ ಅವತಾರ ತಾಳಿ ಮೂರು ಲೋಕಕ್ಕೆ ವಸ್ತ್ರ ಸೂತ್ರ ನೀಡಿದರು ಎಂದು ಸಮಾಜದ ಜಿಲ್ಲಾಧ್ಯಕ್ಷ ಸಂಕಪ್ಪ ಮಾರನಾಳ ಹೇಳಿದರು.
ಶ್ರೀ ರಾಮಲಿಂಗೇಶ್ವರ ಮಠದಲ್ಲಿ ನಡೆದ ದೇವಲ ಮಹರ್ಷಿ ಜಯಂತಿ ಕುರಿತು ಅವರು ಮಾತನಾಡಿದರು.
ವಿದ್ಯಾಧರ, ಚಿತ್ರಯೋಗಿ, ದೇವಶಾಲಿ, ಪುಷ್ಪದಂತ, ಬೇತಾಳ, ವರರುಚಿ ನಂತರದಲ್ಲಿ ವಚನಬ್ರಹ್ಮ ದಾಸೀಮ ಯ್ಯರಾಗಿ ಸಾಮಾಜಿಕ ಚಿಂತನೆ ನಡೆಸಿದರು.ದೇವಾಂಗ ಸಮಾಜದ ಕುಲಗುರು ಶ್ರೀ ರಾಮಲಿಂಗ, ಶ್ರೀ ಚೌಡೇಶ್ವರಿ ಹಾಗೂ ಶ್ರೀ ಬನಶಂಕರಿಯರಾಗಿದ್ದು, ಶೈವ ಆಗಮೋಕ್ತ, ಶಾಕ್ತ, ವೈಷ್ಣವ, ಸಾಮದೇವ ಮತ್ತು 140 ಗೋತ್ರಗಳಲ್ಲಿ ದೇವಾಂಗ ತತ್ವ ಮತವು ಬೆಳಗುತ್ತದೆ.
ವ್ಯಾಸ ರಚಿತ ಬ್ರಹ್ಮಾಂಡ ಪುರಾಣದ ಶ್ರೀಮದ್ ಭಗವದ್ಗೀತೆಯ ವಿಭೂತಿ ಯೋಗದಲ್ಲಿ ದೇವಲ ಮಹ ರ್ಷಿಯ ಪ್ರಸ್ತಾಪವಿದೆ ಎಂದರು. 12 ನೇ ಶತಮಾನದ ಹೇಮಕೂಟ ಗಾಯತ್ರಿ ಪೀಠವು ದೇವಾಂಗರ ಏಕೈಕ ಪೀಠವಾಗಿದೆ. ಕಾಶಿ, ಶ್ರೀಶೈಲ, ಹಂಪಿ, ಶೋಣಾಚಲಂ ಮತ್ತು ಶಂಭು ಶೈಲಂ ಜಗದ್ಗುರು ಪೀಠಗಳಾಗಿವೆ ಎಂದರು.
ಪ್ರಾರಂಭದಲ್ಲಿ ದೇವಲ ಮಹರ್ಷಿ ಭಾವಚಿತ್ರದ ಮೆರವಣಿಗೆಯು ನಡೆಯಿತು. ಮೆರವಣಿಗೆಯು ಕುದು ರಿಗಲ್ಲಿಯ ಶ್ರೀ ಬನಶಂಕರಿ ದೇವಸ್ಥಾನದಿಂದ ಹೊರಟು, ದೊಡ್ಡಪೇಟೆ ಶ್ರೀ ರಾಮಲಿಂಗ ಮಠ ತಲುಪಿತು. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ನಡೆಯಿತು.
ಡಾ. ಬಸವರಾಜ ಕೇಲಗಾರ, ಬಸವರಾಜ ಲಕ್ಷ್ಮೇಶ್ವರ, ಬಸವರಾಜ ಮೈಲಾರ, ಅಶೋಕ ದುರ್ಗದಶೀಮಿ, ನಾಗರಾಜ ಲಕ್ಷ್ಮೇಶ್ವರ, ಗಣೇಶ ಸಿರಗೂರ, ಲಕ್ಷ್ಮಿಕಾಂತ ಹುಲಗೂರ, ಗಣೇಶ ಸಾಲಗೇರಿ, ಗಣೇಶ ಹಾವನೂರ, ಈರಣ್ಣ ಕೋಳಿವಾಡ, ಸೌಮ್ಯ ಹರಿಹರ, ಅಮೃತಾ ಹಳ್ಳಿಯವರ, ಭೋಜರಾಜ ಗುಲಗಂಜಿ, ರತ್ನಾ ದಿಗಿದಿಗಿ, ನಾರಾಯಣಪ್ಪ ಹುಲಗೂರ, ಕರಬಸಪ್ಪ ನೀಲಗುಂದ ಮತ್ತಿತರರಿದ್ದರು.