ನಾಸ್ತಿಕನಾಗಿ ಬಾಳುವುದಕ್ಕಿಂತ ಆಸ್ತಿಕನಾಗಿ ಬಾಳುವುದು ಶ್ರೇಷ್ಠ

ಸಾಲಕಟ್ಟೆ ದೇವಾಲಯ ಕಳಸಾರೋಹಣದಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳ ಅಭಿಮತ

ಮಲೇಬೆನ್ನೂರು, ನ.16- ಭಾರತ, ಧರ್ಮ ಪ್ರಧಾನವಾದ ದೇಶವಾಗಿದ್ದು, ಇಲ್ಲಿರುವಷ್ಟು ದೇವಾಲಯಗಳನ್ನು ಬೇರೆ ಯಾವ ದೇಶಗಳಲ್ಲಿ ನೋಡಲು ಸಾಧ್ಯವಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಸಾಲಕಟ್ಟೆ ಗ್ರಾಮದಲ್ಲಿ ನಿನ್ನೆ ಏರ್ಪಾಡಾಗಿದ್ದ ಸಮಾರಂಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗೋಪುರಕ್ಕೆ ಕಳಸಾ ರೋಹಣ ನೆರವೇರಿಸಿ, ಜನಜಾಗೃತಿ ಧಾರ್ಮಿಕ ಸಮಾರಂಭದ ನೇತೃತ್ವ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಭಾರತೀಯರ ಹೃದಯದಲ್ಲಿ ದೇವರು ವಾಸವಾಗಿ ದ್ದಾನೆಂದು ಹೇಳಲು ನಮಗೆ ಸಂತಸವಾಗುತ್ತದೆ. ದೇವರು ಇರುವುದು ಸತ್ಯ. ದೇವರು ಇದ್ದಾನೆ ಎನ್ನುವವರಿಗೆ ಇದ್ದಾನೆ, ದೇವರಿಲ್ಲ ಎನ್ನುವವರು ದೇವರ ಅನುಗ್ರಹದಿಂದ ವಂಚಿತರಾಗುತ್ತಾರೆ. ನಾಸ್ತಿಕರಾಗಿ ಬಾಳುವುದಕ್ಕಿಂತ ಆಸ್ತಿಕರಾಗಿ ಬಾಳುವುದು ಶ್ರೇಷ್ಠ. ಭಾರತ ದೇಶ ಅಧ್ಯಾತ್ಮದ ತವರೂರಾಗಿದ್ದು, ಇಲ್ಲಿಯ ಧರ್ಮ ಮತ್ತು ಸಂಸ್ಕೃತಿ ಅತ್ಯಂತ ಉತ್ಕೃಷ್ಟವಾಗಿದೆ. ಅವುಗಳನ್ನು ಉಳಿಸಿ, ಬೆಳೆಸಲು ಇಂತಹ ಕಾರ್ಯಕ್ರಮಗಳು ದೇಶದಲ್ಲಿ ಸದಾಕಾಲ ನಡೆಯುತ್ತಿರಬೇಕೆಂದು ಶ್ರೀಗಳು ತಿಳಿಸಿದರು.

ಮಾಜಿ ಶಾಸಕ ಹೆಚ್.ಎಸ್‌. ಶಿವಶಂಕರ್ ಮಾತನಾಡಿ, ಪಂಚಪೀಠಗಳು ವೀರಶೈವ ಲಿಂಗಾಯತ ಧರ್ಮದ ಮೂಲಪೀಠಗಳಾಗಿವೆ. ರಾಜಕೀಯ ಅಧಿಕಾರ ಅಥವಾ ತಮ್ಮ ಜಾತಿಯ ಜನರ ಉದ್ಧಾರಕ್ಕಾಗಿ ಪಾದಯಾತ್ರೆ ಮಾಡುವವರನ್ನು ನೋಡಿದ್ದೇವೆ. ಆದರೆ, ಶ್ರೀಶೈಲ ಜಗದ್ಗುರುಗಳು ಸರ್ವರ ಕಲ್ಯಾಣಕ್ಕಾಗಿ ಬೆಳಗಾವಿ ಜಿಲ್ಲೆಯ ಯಡ್ಯೂರಿನಿಂದ ಶ್ರೀಶೈಲದವರೆಗೆ ಸಾವಿರಾರು ಕಿ.ಮೀ. ಪಾದಯಾತ್ರೆ ಮಾಡಿ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಹಿರಿಯರಾದ ಡಿ.ಎಂ. ಹಾಲಸ್ವಾಮಿ ಧರ್ಮಸಭೆಯ ಅಧ್ಯಕ್ಷತೆ  ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಪಿ. ಮಂಜುನಾಥ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್. ಚಂದ್ರಪ್ಪ,  ಗ್ರಾಮದ ಮುಖಂಡ ರಾದ ಆರ್.ಸಿ. ಬಸವರಾಜಪ್ಪ, ಕಡೇಮನಿ ಯೋಗಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ನಾಗರಾಜ್, ಸದಸ್ಯರಾದ ದೀಪಾ ನಿರಂಜನ್, ಅನುಪಮ ಸಿದ್ದಪ್ಪ, ಸೇವಾ ಸಮಿತಿಯ ಎಸ್.ಜಿ. ಶರಣಪ್ಪ, ಟಿ.ಎಂ. ಮಹೇಶ್ವರಯ್ಯ, ಎಸ್.ಜಿ.ಮಂಜುನಾಥ, ಭಾನುವಳ್ಳಿ ರಾಜಪ್ಪ, ಕಮಲಾಪುರದ ರುದ್ರಪ್ಪ, ಡಿ.ಎಂ. ಜಯದೇವಯ್ಯ, ಕೆ.ಎನ್. ಮಂಜು ನಾಥ, ಡಿ.ಹೆಚ್. ರೇವಣಸಿದ್ದಪ್ಪ, ಇಟಗಿ ಶಿವಾನಂದಪ್ಪ, ಎಸ್.ಜಿ. ಕುಬೇರಗೌಡ, ಕೆ.ಆರ್. ಮಂಜುನಾಥ ಇದ್ದರು. 

ಶಿಕ್ಷಕ ಆರ್.ಬಿ. ಮಲ್ಲಿಕಾರ್ಜುನ ಸ್ವಾಗತಿಸಿದರು. ಉಪನ್ಯಾಸಕ ಎಸ್.ಜಿ. ಸುನೀಲ್ ಕುಮಾರ್ ವಂದಿಸಿದರು.

error: Content is protected !!