ಜಾತ್ರೆ ಇಲ್ಲದೆ ನಡೆದ ಕಾರಣಿಕಗಳು

ಮಲೇಬೆನ್ನೂರು, ಆ.13- ಕೋವಿಡ್ ಹಿನ್ನೆಲೆಯಲ್ಲಿ ನಾಗರ ಪಂಚಮಿ ಅಂಗವಾಗಿ ಜರುಗಬೇಕಾಗಿದ್ದ ಜಾತ್ರೆ, ಉತ್ಸವದ ಕಾರಣಿಕಗಳನ್ನು ಜಿಲ್ಲಾಡಳಿತ ರದ್ದು ಪಡಿಸಿತ್ತಾದರೂ ನಂದಿಗುಡಿ, ಕೊಮಾರನಹಳ್ಳಿ, ಜಿಗಳಿ, ಕುಂಬಳೂರಿನಲ್ಲಿ ಸಂಪ್ರದಾ ಯದಂತೆ ಸರಳವಾಗಿ ಕಾರಣಿಕ ಮಾತ್ರ ನಡೆದವು.

ಜಿಗಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವರನ್ನು ಹೊತ್ತ ಯಲವಟ್ಟಿಯ ಹನುಮಂತ ದೇವರ ಪೂಜಾರಪ್ಪ ಪ್ರತಿವರ್ಷ ಉಪಾವಾಸವಿದ್ದು, ಜಿಗಳಿ ಯಿಂದ ಹರಿಹರಕ್ಕೆ ತೆರಳಿ ತುಂಗಭದ್ರಾ ನದಿ ದಡದಲ್ಲಿ ವಿವಿಧ ಗ್ರಾಮಗಳ ದೇವರುಗಳ ಹಾಗೂ ಸಾವಿರಾರು ಜನರ ಸಮ್ಮುಖದಲ್ಲಿ ಬಿಲ್ಲನೇರಿ ಕಾರಣಿಕ ಹೇಳುತ್ತಿದ್ದರು.

ಜಿಗಳಿ ಮತ್ತು ಯಲವಟ್ಟಿ ಗ್ರಾಮಸ್ಥರು ಕಾರಣಿಕದ ಜಾತ್ರೆ ಮಾಡದೆ, ಪೂಜಾರಪ್ಪ ವಾಸ್ತವ್ಯ ಹೂಡಿದ್ದ ಮನೆಯ ಮುಂಭಾಗದಲ್ಲಿ ಸ್ವಲ್ಪ ಜನರ ಸಮ್ಮುಖದಲ್ಲಿ ಸಂಪ್ರ ದಾಯದಂತೆ ಕಾರಣಿಕ ನುಡಿದರು. §ಬಂಗಾರದ ಗಿಣಿ ಛಿದ್ರವಾದೀತು ಎಚ್ಚರಲೇ¬ ಎಂದು ಜಿಗಳಿ ರಂಗ ನಾಥ ಸ್ವಾಮಿ ಕಾರಣಿಕ ನಡೆಯಿತು. ಇದನ್ನು ರಾಜ ಕೀಯವಾಗಿ ವಿಶ್ಲೇಷಣೆ ಮಾಡಲಾಗುತ್ತದೆ ಎನ್ನಲಾಗಿದೆ. 

ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಕೆರೆ ಅಂಗಳದಲ್ಲಿ ಪ್ರತಿವರ್ಷ ಹತ್ತಾರು ಗ್ರಾಮಗಳ ದೇವರು ಹಾಗೂ ಸಾವಿರಾರು ಜನರ  ಸಮ್ಮುಖದಲ್ಲಿ ಜರುಗುತ್ತಿದ್ದ ಹರಳಹಳ್ಳಿ ಆಂಜ ನೇಯ ಸ್ವಾಮಿಯ ಕಾರಣಿಕ ಕಳೆದ ವರ್ಷವೂ ರದ್ದಾ ಗಿತ್ತು. ಈ ವರ್ಷ ಜಾತ್ರೆ ರದ್ದು ಮಾಡಿದ್ದರೂ ಸಂಪ್ರ ದಾಯ ಬಿಡಬಾರದೆಂದು ತೀರ್ಮಾನಿಸಿದ ಗ್ರಾಮಸ್ಥರು ಸಂಪ್ರದಾಯದಂತೆ ಕೆಲವೇ ಜನರು ಕೊಮಾರನಹಳ್ಳಿ ಕೆರೆಗೆ ಆಗಮಿಸಿ, ಗಂಗೆ ಪೂಜೆ ನೆರವೇರಿಸಿ, ಉಪವಾಸ ಇದ್ದ ಪೂಜಾರಪ್ಪ ಅವರಿಂದ ಕಾರಣಿಕ ನುಡಿಸಿಕೊಂಡು ತೆರಳಿದ್ದಾರೆ ಎಂದು ತಿಳಿದು ಬಂದಿದೆ.

§ಗಗನದ ಚುಕ್ಕಿ ಭೂಲೋಕ ಹೊಕ್ಕಿತಲೇ, ಮುತ್ತಿನ ರಾಶಿಗೆ ಕಂಬಳಿ ಮುತ್ತಿತಲೇ. ಅನ್ನ, ನೀರು ಸಂತುಷ್ಟಿ¬ ಎಂದು ಹರಳಹಳ್ಳಿ ಆಂಜನೇಯ ಸ್ವಾಮಿ ಕಾರಣಿಕ ಆಗಿದೆ.

ನಂದಿಗುಡಿಯಲ್ಲೂ ಕೊಕ್ಕನೂರು ಆಂಜನೇಯ ಸ್ವಾಮಿಯ ಕಾರಣಿಕ ಮಧ್ಯಾಹ್ನವೇ ಸ್ವಲ್ಪ ಜನರ ಸಮ್ಮುಖದಲ್ಲಿ ನಡೆದಿದ್ದು, §§ಆಕಾಶಕ್ಕೆ ಗಾಳಿ ಬೀಸಿತು. ಬೀಸಿ ನಿಂತೀತು ಅದಕ್ಕೆ ನಾ ಅದನಿ¬¬ ಎಂದು ಹೇಳಿದೆ.

ಕುಂಬಳೂರಿನಲ್ಲಿ ಶ್ರೀ ಹನುಮಂತ ದೇವರ ಕಾರಣಿಕ ಸಂಜೆ ಜರುಗಿದ್ದು, §§ನರಲೋಕಕ್ಕೆ ಮತ್ತುಗವದೀತು. ಬಸವನ ಪಾದ ಇಟ್ಟ ಕಡೆ ಲಿಂಗ ಹುಟ್ಟೀತು. ಕಾಳಿಗ ಸರ್ಪ ವಿಷಕಾರೀತು ಸಂಪು¬¬ ಎಂದು ದಾಸಪ್ಪ ಕಾರಣಿಕ ನುಡಿದರು.

error: Content is protected !!