ಹರಪನಹಳ್ಳಿಯಲ್ಲಿ ಎಂ.ಪಿ.ವೀಣಾ
ಹರಪನಹಳ್ಳಿ, ಮಾ.28- ತಾಲ್ಲೂಕಿನ ರಾಗಿಮಸಲವಾಡದ ಸಾರ್ವಜನಿಕ ಆಸ್ವತ್ರೆಯ ಆವರಣದಲ್ಲಿ ಶ್ರೀ ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ತಥಾಗತ್ ಹೃದ್ರೋಗ ಆಸ್ವತ್ರೆ, ಭಾರತೀಯ ಹೃದ್ರೋಗ ಸಂಸ್ಥೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಇವರುಗಳ ಸಹಯೊಗದೊಂದಿಗೆ ಬೆಂಗಳೂರು ಹಾಗೂ ದಾವಣಗೆರೆಯ ಪ್ರಖ್ಯಾತ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ನಡೆಯಿತು.
ನಂತರ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಚರಂತಿಮಠ್, ಉತ್ತಮ ಕೆಲಸ ಮಾಡಲು ಅಧಿಕಾರ ಬೇಕಾಗಿಲ್ಲ. ಸಮಾಜಮುಖಿ ಕೆಲಸ ಮಾಡಲು ಸದಾ ಸಿದ್ದರಿದ್ದೇವೆ. ನಗರ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಮೇಳ ಮಾಡಿದರೆ ನಮಗೆ ಸೌಕರ್ಯಗಳು ಸಿಗುತ್ತವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮೇಳಗಳನ್ನು ಮಾಡಿದರೆ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಇಂತಹ ಕಡೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಮಧುಸೂದನ್ ಕಾರ್ಯಕ್ರಮ ಉದ್ಘಾಟಿಸಿದರು.ಉಪಾಧ್ಯಕ್ಷ ಡಾ.ಮಹಂತೇಶ ಚರಂತಿಮಠ್ ಮಾತನಾಡಿದರು.
ಉಪಾಧ್ಯಕ್ಷ ಡಾ. ಶ್ರೀನಿವಾಸ, ಕಾರ್ಯದರ್ಶಿಗಳಾದ ಭಗವತ್ ರಾಂ, ಡಾ. ರೂಪೇಶ್, ಎಸ್.ಎಸ್ ಆಸ್ವತ್ರೆಯ ವೈದ್ಯ ಡಾ. ವಿಕ್ರಂ, ರಾಗಿಮಸಲವಾಡದ ವೈದ್ಯ ಪ್ರಭುದೇವ್, ಡಾ. ಸುನೀಲ್, ಚಿಗಟೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ರಾಗಿಮಸಲವಾಡದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಶೇಖರಗೌಡ, ಉಪಾಧ್ಯಕ್ಷ ಠಾಕ್ರಾನಾಯ್ಕ, ಸದಸ್ಯರಾದ ಕರಿಬಸಪ್ಪ, ಹನುಮಂತಪ್ಪ, ವೆಂಕಟೇಶ, ಮಂಜಪ್ಪ, ಶಂಕ್ರನಾಯ್ಕ, ಸೋಮಪ್ಪ, ಮಹಂತೇಶ, ಎಸ್.ಟಿ. ಮಂಜಪ್ಪ, ಉಷಾಬಾಯಿ, ಮುಖಂಡರಾದ ಗಾಯಿತ್ರಮ್ಮ, ದಾದಾಪೀರ್, ಮನೋಜ್‌ಕುಮಾರ್, ಕೊಟ್ರೇಶ್ ಇನ್ನಿತರರಿದ್ದರು.