ಹರಪನಹಳ್ಳಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ
ಹರಪನಹಳ್ಳಿ, ಮಾ.28- ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನಾವೆಲ್ಲರೂ ಒಂದೇ ಬಣ. ಅದು ಕಾಂಗ್ರೆಸ್ ಬಣ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಹೇಳಿದರು.
ಪಕ್ಷ ಸಂಘಟನೆಯ ಸಲುವಾಗಿ ವಿಜಯನಗರ ಜಿಲ್ಲೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಗ ಮಧ್ಯದಲ್ಲಿ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ನಿವಾಸಕ್ಕೆ ಆಗಮಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನವರ ಬಣ, ಡಿ.ಕೆ. ಶಿವಕುಮಾರ ಬಣ, ಹೆಚ್.ಕೆ. ಪಾಟೀಲ್ ಬಣ ಎಂದು ಹೇಳಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕಾಂಗ್ರೆಸ್‍ನಲ್ಲಿ ಇರುವುದೊಂದೇ ಬಣ. ಅದು ಕಾಂಗ್ರೆಸ್ ಬಣ ಎಂದು ಸ್ಪಷ್ಟನೆ ನೀಡಿದರು.
ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವುದು ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ತೆರೆದಿಡುವುದು ಹಾಗೂ ವೈಫಲ್ಯ ತಿಳಿಸುವುದೇ ನಮ್ಮ ಗುರಿ. ಶೀಘ್ರದಲ್ಲೇ `ನಮ್ಮೂರ ಮಹಿಳಾ ಸಾಧಕರು’ ಎನ್ನುವ ಶೀರ್ಷಿಕೆಯಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಟಿ. ಭರತ್ ಮಾತನಾಡಿ, 150ಕ್ಕೂ ಹೆಚ್ಚು ಸೀಟುಗಳನ್ನು ಪಡೆದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ನೀಲಗುಂದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ. ಪರಶುರಾಮಪ್ಪ, ರಾಜ್ಯ ಮಹಿಳಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್, ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಪಿ. ಪ್ರೇಮ್ ಕುಮಾರ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುತ್ತಿಗಿ ಸಾಬಳ್ಳಿ ಜಂಬಣ್ಣ, ಪುರಸಭೆ ಸದಸ್ಯರುಗಳಾದ ಜಾಕೀರ್ ಸರ್ಖಾವಾಸ್, ಜೋಗಿನ ಭರತೇಶ, ಮುಖಂಡರಾದ ಆಲದಳ್ಳಿ ಷಣ್ಮುಖಪ್ಪ, ಮತ್ತಿಹಳ್ಳಿ ಅಜ್ಜಣ್ಣ, ತಿಮ್ಮಾನಾಯ್ಕ, ಪಿ.ಎಲ್. ಪೋಮ್ಯಾನಾಯ್ಕ, ಅರುಣ ಪೂಜಾರ್, ವೇದುನಾಯ್ಕ, ಡಿ. ನೇಮಾನಾಯ್ಕ, ಹುಲಿಕಟ್ಟೆ ಬಾಷ, ಎಲ್.ಬಿ. ಹಾಲೇಶನಾಯ್ಕ, ಆರ್. ಮಹಾಂತೇಶನಾಯ್ಕ, ಟಿ. ಪ್ರವೀಣ್‌ಕುಮಾರ್, ತಿಮ್ಮಣ್ಣ, ಅಡವಿಹಳ್ಳಿ ಪೂಜಾರ್ ರಾಜು, ಮಂಜು, ಎಂ.ಕೆ. ರಾಯಲ್ ಸಿದ್ಧೀಕ್, ಚಿಗಟೇರಿ ಜಂಬಣ್ಣ, ಶ್ರೀಕಾಂತ್ ಯಾದವ್, ಬಸವರಾಜ್ ಹುಲಿಯಪ್ಪನವರ್, ರಿಯಾಜ್ ಅಹಮದ್, ಲಾಟಿ ನವರಂಗ್, ಅಲಮರಸಿಕೇರಿ ಪರುಶುರಾಮ, ಓ. ಮಹಾಂತೇಶ, ಶಂಕರ್ ಇನ್ನಿತರರಿದ್ದರು.