ವಜ್ರೇಶ್ವರಿ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.28 – ವಜ್ರೇಶ್ವರಿ ಮಹಿಳಾ ಸಂಸ್ಥೆಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ಜನಪದ ವೇಷಭೂಷಣ ಸ್ಪರ್ಧೆ ಹಾಗೂ ಜನಪದ ಹಾಡು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

 ಮುಖ್ಯ ಅತಿಥಿಗಳಾಗಿ ಕುರ್ಕಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಡಾ. ಹೆಚ್‍.ಎಸ್. ಮಂಜುನಾಥ್ ಕುರ್ಕಿ ಆಗಮಿಸಿದ್ದರು, ಬಾಪೂಜಿ ನರ್ಸಿಂಗ್ ಕಾಲೇಜಿನ ರಿಟೈರ್ಡ್ ಸೂಪರಿಂಟೆಂಡೆಂಟ್ ಸರ್ವಮಂಗಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು, ವಿಜಯ ಸಿ. ಅಕ್ಕಿ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. 

ತೀರ್ಪುಗಾರರಾಗಿ ಶೈಲಜ ತಿಮ್ಮೇಶ್, ರೇಖಾ ಓಂಕಾರಪ್ಪ, ಮಂಜುನಾಥ್ ಆಗಮಿಸಿದ್ದರು. ವೇಷಭೂಷಣ ಸ್ಪರ್ಧೆಯಲ್ಲಿ ಕೊರವಂಜಿ ಪಾತ್ರದ ಗಾಯತ್ರಿ ರವಿ ಮೊದಲನೇ ಬಹುಮಾನವನ್ನು ಪಡೆದರು, ಎರಡನೇ ಬಹುಮಾನ ತನುಜಾ ಪಡೆದು ಕೊಂಡರು, ಮೂರನೇ ಬಹುಮಾನ ಸುಜಾತ ಅವರ ತಂಡ ಪಡೆದುಕೊಂಡಿತು ಹಾಗೂ ಸಮಾಧಾನಕರ ಬಹುಮಾನವನ್ನು ಭಾಗವಹಿಸಿದ ಎಲ್ಲರಿಗೂ ಕೊಡಲಾಯಿತು.

ಜನಪದ ಹಾಡಿಗೆ ಮೊದಲನೆ ಬಹುಮಾನ ಪ್ರೀತಿ ತಂಡಕ್ಕೆ ಲಭಿಸಿತು. ಎರಡನೇ ಬಹುಮಾನ ಸುಜಾತ ತಂಡಕ್ಕೆ ಲಭಿಸಿತು ಮೂರನೇ ಬಹುಮಾನ ಸುನಂದಾ ತಂಡಕ್ಕೆ ಲಭಿಸಿತು.

ಚಂದ್ರಿಕ ಜಗನ್ನಾಥ್ ನಿರೂಪಿಸಿದರು, ಮಂಗಳ ಮಲ್ಲಿಕಾರ್ಜುನ್ ಪ್ರಾರ್ಥಿಸಿದರು, ಸುಜಾತ ನಾಗೇಶ್ ಸ್ವಾಗತಿಸಿದರು, ಮಂಗಳ ಮಲ್ಲಿಕಾರ್ಜುನ್ ವಂದಿಸಿದರು, ಅತಿಥಿ ಪರಿಚಯ ವೇಣುಗೋಪಾಲ್ ಹಾಗೂ ಜ್ಯೋತಿ ಹೆಚ್‍.ಎಸ್. ಐಶು ಕಮಿಟಿಯ ಎಲ್ಲಾ ನಿರ್ದೇಶಕರುಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

error: Content is protected !!