ತೌಡೂರು ಗ್ರಾಮದಲ್ಲಿ ಶಾಸಕ ಎಸ್ವಿಆರ್
ಹರಪನಹಳ್ಳಿ, ಮಾ.28. – ಇಂದಿನ ಯುವ ಪೀಳಿಗೆ ಮೊಬೈಲ್, ಕಂಪ್ಯೂಟರ್ಗಳ ದಾಸರಾಗಿ ಗ್ರಾಮೀಣ ಕ್ರೀಡೆಗಳಿಂದ ದೂರ ಉಳಿಯುವಂತಾಗಿದೆ ಎಂದು ಕರ್ನಾಟಕ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗು ಶಾಸಕ ಎಸ್.ವಿ. ರಾಮಚಂದ್ರಪ್ಪ ಹೇಳಿದರು.
ತಾಲ್ಲೂಕಿನ ತೌಡೂರು ಗ್ರಾಮದಲ್ಲಿ ಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕಬಡ್ಡಿ ಆಟ ಗಂಡು ಮೆಟ್ಟಿನ ಆಟವಾಗಿದ್ದು, ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾ ಗಿದ್ದು, ಕ್ರೀಡೆಗಳಿಂದ ಸದೃಢ ಆರೋಗ್ಯ ಕಾಪಾ ಡಲು ಸಾಧ್ಯವಾಗುತ್ತದೆ ಎಂದರು. ಯಶಸ್ವೀ ಕ್ರೀಡಾ ಪಟುವಿಗೆ ಸದೃಢ ದೇಹದ ಜೊತೆಗೆ ಸದೃಢ ಮನಸ್ಸು ಬೇಕಾಗಿದೆ. ಶಾಲಾ-ಕಾಲೇಜುಗಳಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ. ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಕ್ರೀಡೆ ಅವಶ್ಯಕವಾಗಿದೆ ಎಂದರು.
ನಾನು ಶಾಸಕನಾದ ನಂತರ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜಗಳೂರು ವಿಧಾನಸಭಾ ವ್ಯಾಪ್ತಿ ಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಲಾಗಿದೆ. ಜಗಳೂರು ಮತ್ತು ಅರಸೀಕೆರೆ ಹೋಬಳಿಯ ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯರೂಪದಲ್ಲಿದ್ದು, ಭರದಿಂದ ಕಾಮಗಾರಿ ನಡೆಯುತ್ತಿದೆ. ಅತಿ ಶೀಘ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡು ತ್ತೇನೆ ಎಂದರು. 7 ಗ್ರಾಮ ಪಂಚಾಯುತಿ ಭಾಗ ದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅನೇಕ ಕಡೆ ನೂತನ ಶಾಲಾ ಕೊಠಡಿಗಳು ನಿರ್ಮಾಣಗೊಂಡಿವೆ. ಕಂಚಿಕೇರಿಯಿಂದ ಅರಸೀಕೆರೆಯವರೆಗೆ ಸುಸಜ್ಜಿತ ರಸ್ತೆ ಕಾಮಗಾರಿ ಶೀಘ್ರದಲ್ಲಿ ಮುಗಿಯಲಿದೆ ಎಂದರು.
ಜಿ.ಪಂ. ಸದಸ್ಯ ಡಿ. ಸಿದ್ದಪ್ಪ, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್, ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಬ್ಯಾಲನ ಹಳ್ಳಿ ಕೆಂಚನಗೌಡ, ಕಾವಲಹಳ್ಳಿ ಭರ್ಮಪ್ಪ, ಬಿದರಕೆರೆ ರವಿಕುಮಾರ್, ಮಂಜಯ್ಯ, ರಾಜನಾಯ್ಕ, ಗೋಪಿನಾಯ್ಕ, ಸುನೀಲ್, ಪಿ.ಎಸ್.ಐ. ಕಿರಣ್ಕುಮಾರ್ ಇತರರಿದ್ದರು.