ದಾವಣಗೆರೆ, ಮಾ. 26- ಈಚೆಗೆ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಥ್ರೋ-ಬಾಲ್, ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಅಥ್ಲೆಟಿಕ್ಸ್ ಹಾಗೂ ಕರಾಟೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಒಟ್ಟು 16 ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಖೋ-ಖೋ, ಬ್ಯಾಸ್ಕೆಟ್ಬಾಲ್, ಕರಾಟೆ, ಫುಟ್ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಒಟ್ಟು 22 ಬಾಲಕರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರು : ಬಾಲಕಿಯರ ವಿಭಾಗದಲ್ಲಿ ಸಹನ ಎಸ್.ಎಸ್., ಸಹನ (ಅಥ್ಲೆಟಿಕ್ಸ್), ಕವನ, ಖುಷಿ, ಗೀತಾ, ಅಂಜಲಿ, ವರ್ಷ, ನಿಶಾ (ಬ್ಯಾಸ್ಕೆಟ್ಬಾಲ್), ಚೈತನ್ಯ, ಲಕ್ಷ್ಮಿ (ವಾಲಿಬಾಲ್), ಲಾವಣ್ಯ, ಆಷಿಯ ರಕ್ಷಿತ (ಕರಾಟೆ), ಜ್ಯೋತಿ, ಸಂಚಿತ (ಖೋ-ಖೋ) ಹಾಗೂ ದರ್ಶಿನಿ (ಥ್ರೋ-ಬಾಲ್).
ಬಾಲಕರ ವಿಭಾಗದಲ್ಲಿ : ಸುದೀಪ, ಕಿರಣ್
(ಖೋ-ಖೋ), ಮೋಹಿತ್ (ಥ್ರೋ-ಬಾಲ್), ಎಲ್. ಯುವರಾಜ್, ಬಿ.ಎಂ. ಮಂಜುನಾಥ್, ಸಿ.ಪಿ. ಮಂಜುನಾಥ್, ದರ್ಶನ್, ಡಿ. ದೀಪಕ್ (ಅಥ್ಲೆಟಿಕ್ಸ್), ಕಲ್ಲೇಶ್
(ಕರಾಟೆ), ಸಂಭ್ರಮ್, ರಾಹುಲ್, ಪವನ್, ಪ್ರಜ್ವಲ್, ಶ್ಯಾಮ್, ವರುಣ್ ಜಾಧವ್, ಜೀವನ್ (ಫುಟ್ಬಾಲ್), ಅಬ್ದುಲ್ ಕಲಾಂ ಆಜಾದ್ ಹೆಚ್., ಮಹೇಂದ್ರಕರ್, ಕೆ. ಮಾತರಿಶ್ವ, ಸಿ. ಮಹೇಶ್ (ಬಾಸ್ಕೆಟ್ ಬಾಲ್) ಹಾಗೂ ಸುದರ್ಶನ್, ವಿಕಾಸ್ (ಟೇಬಲ್ ಟೆನ್ನಿಸ್).