ಕಡಾರನಾಯ್ಕನಹಳ್ಳಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ

ಮಲೇಬೆನ್ನೂರು, ಆ.5 – ಕಡಾರನಾಯ್ಕನಹಳ್ಳಿ ಗ್ರಾಮದಲ್ಲಿ ನಂದಿಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಸ್ತನ್ಯಪಾನ  ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಪ್ರಾಸ್ತಾವಿಕವಾಗಿ ಮಾತನಾಡಿದ ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಅವರು, ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾಗಿದ್ದು ತಾಯಿಂದಿರು ಮಗು ಹುಟ್ಟಿದ 1 ಗಂಟೆಯೊಳಗೆ ಎದೆ ಹಾಲು ಕುಡಿಸಬೇಕು ಎಂದು ಹೇಳಿದರು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿರಾದ ಶಿಲ್ಪ ಮಾತನಾಡಿ, ಮಹಿಳೆ ಗರ್ಭಿಣಿಯಾಗಿದ್ದಾಗ ಮತ್ತು ಹೆರಿಗೆ ನಂತರ ಪೌಷ್ಠಿಕ ಆಹಾರಗಳನ್ನು , ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸಿದರೆ ಮಗು ಸದೃಢವಾಗಿ ಬೆಳೆಯುತ್ತದೆ ಎಂದರು.

ಟಿ.ಹೆಚ್‍.ಓ ಡಾ. ಡಿ.ಎಂ ಚಂದ್ರಮೋಹನ್‍ ಮಾತನಾಡಿದರು. ಗ್ರಾ.ಪಂ ಸದಸ್ಯರಾದ ಹುಸೇನ್ ಸಾಬ್‍, ಪರಶುರಾಮ್‌ ತಾ. ಆಶಾ ಮೇಲ್ವಿಚಾರಕರಾದ ಆಶಾ. ಆರೋಗ್ಯ ಸಿಬ್ಬಂದಿ ಶಾಂತಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಜಯ್ಯಮ್ಮ, ಆಶಾ ಕಾರ್ಯಕರ್ತರಾದ ಶೀಲಾ, ನಿಂಗಮ್ಮ, ವಿಜಯಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.

error: Content is protected !!