ದಾವಣಗೆರೆ, ಜೂ.27 – ನಗರ ಪಾಲಿಕೆಯ 38ನೇ ವಾರ್ಡಿನ ಎಂ.ಸಿ.ಸಿ ಬಿ ಬ್ಲಾಕ್ 7ನೇ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಕಾಮಗಾರಿಗೆ ಈ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.
ಡಾ. ಗುರುಪ್ರಸಾದ್, ಬಿ.ಹೆಚ್. ಪರ ಶುರಾಮಪ್ಪ, ನಿವೃತ್ತ ಇಇ ಗುರುಮೂರ್ತಿ, ಅಮಿತ್ ಅಂಬರ್ಕರ್, ಕಂಟ್ರ್ಯಾಕ್ಟರ್, ಬಸವರಾಜಪ್ಪ, ಆಲೂರು ಜ್ಯೋತಿರ್ಲಿಂಗ, ಪ್ರಮೋದ್, ಪ್ರಜ್ವಲ್, ಜಿ.ಎಸ್. ಸತೀಶ್, ದೊಗ್ಗಳ್ಳಿ ಚಂದ್ರಶೇಖರ್, ಜಿ.ಎಸ್.
ಮನು, ವಿವೇಕಾನಂದ ಕರಿಗೌಡ್ರು, ನಿಖಿಲ್ ಮಂತ್ರಿ, ನೀಲಕಂಠಪ್ಪ, ಮಧುಸೂದನ್, ಎಇ ಕೆ.ಬಿ. ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.
ಹಲವು ಜನೋಪಯೋಗಿ ಯೋಜನೆ ಗಳನ್ನು ಕೈಗೆತ್ತಿಕೊಂಡು ನಾಗರಿಕ ಸೌಲಭ್ಯಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುತ್ತಿರುವ ಗಡಿಗುಡಾಳ್ ಮಂಜುನಾಥ್ ಅವರ ಸೇವೆಗೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.