ರಾಣೇಬೆನ್ನೂರು, ಆ.5- ತಾಲ್ಲೂಕಿನ ತುಮ್ಮಿನಕಟ್ಟೆಯ ಶ್ರೀ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಗುರು ಮಠ ಮಹಾಸಂಸ್ಥಾನದಲ್ಲಿ ಶ್ರೀ ಗುರು ಪೌರ್ಣಿಮೆ ನಿಮಿತ್ತ ವ್ಯಾಸ ಪೂಜೆಯನ್ನು ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಪ್ರಭುಲಿಂಗ ಸ್ವಾಮೀಜಿ ಅವರಿಗೆ ಹಂಸಾಸನದ ಮೇಲೆ ಬೆಳ್ಳಿ ಕಿರೀಟ ಧಾರಣೆ, ಪಾದಪೂಜೆ ಹಾಗೂ ಗುರು ನಮನ ಸಲ್ಲಿಸಲಾಯಿತು.
ಅಂದು ಪ್ರಾತಃಕಾಲದಲ್ಲಿ ಶ್ರೀ ಪ್ರಭುಲಿಂಗ ಸ್ವಾಮಿಗಳಿಂದ ಶ್ರೀ ಗುರು ಮಾರ್ಕಂಡೇಶ್ವರ ಮುನಿವರ್ಯರಿಗೆ ರುದ್ರಾಭಿಷೇಕ ಹೋಮ, ಹವನ, ವಿಶೇಷ ಮಂತ್ರ ಘೋಷಣೆಯೊಂದಿಗೆ ನೆರವೇರಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಋಷಿಕೇಶದ ಶ್ರೀ ರುದ್ರದೇವ ಯೋಗ ಗುರೂಜಿ, ಹದಡಿ ಮಠದ ಶ್ರೀ ಪ್ರಿಯಾನಂದ ಸ್ವಾಮಿಗಳು, ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆಯ ಪದ್ಮಶಾಲಿ ಸಮಾಜದ ಅಧ್ಯಕ್ಷ ಪಿ.ಜೆ. ನಾಗರಾಜ್, ಗುರುಪೀಠದ ಟ್ರಸ್ಟಿ ಚಂದ್ರಶೇಖರ್ ಮಂಚಿ, ಹನುಮಂತಪ್ಪ ಮುಕ್ತೇನಹಳ್ಳಿ, ನಾಗರಾಜ ಜಿ. ಅಗಡಿ, ಸಿದ್ದಪ್ಪ ಬಸಲಿ, ಡಾ. ಮಂಜುನಾಥ್, ಗೋಪಾಲ ಪೆದ್ದಿಪತಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಪೂಜ್ಯರಿಗೆ ಕಿರೀಟ ಧಾರಣೆಯನ್ನು ಶ್ರೀ ಸದ್ಗುರು ಪ್ರಿಯಾನಂದ ಸ್ವಾಮೀಜಿ, ಶ್ರೀ ರುದ್ರದೇವ ಸ್ವಾಮೀಜಿ ನೆರವೇರಿಸಿದರು. ಇದೇ ವೇಳೆ ತಿಪ್ಪೇಸ್ವಾಮಿ ದಂಪತಿಯಿಂದ ಪಾದಪೂಜೆ ನೆರವೇರಿತು.
ವೇದಿಕೆಯಲ್ಲಿ ಪಟ್ಟಸಾಲಿ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಹಳದಂಡಿ, ದೇವಾಂಗ ಸಮಾಜದ ಅಧ್ಯಕ್ಷ ಪ್ರಕಾಶ ಪಾಟೀಲ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ನಾರಾಯಣಪ್ಪ ಗಡ್ಡದ, ಹುಚ್ಚಪ್ಪ ಹೊಸಮನಿ, ಬಸವರಾಜ ಕೇಲಗಾರ, ಡಿ.ಎಸ್. ಪರಶು ರಾಮ್ ಸೇರಿದಂತೆ, ಮುಖಂಡರುಗಳು ಪೂಜ್ಯರನ್ನು ಸನ್ಮಾನಿಸಿದರು.
ದಾವಣಗೆರೆಯ ಯುವಕ ಸಂಘ ಹಾಗೂ ಸಮಾಜದ ಹಿರಿಯರಾದ ಗಂಗಣ್ಣ ಎಳಗಿ ರಾಣೇಬೆನ್ನೂರಿನ ಶಂಕ್ರಣ್ಣ ಗರಡಿಮನಿ, ನೀಲಪ್ಪ ಕುಮಾರಪ್ಪನವರ, ಲಕ್ಷ್ಮಣ ಕಡ್ಲಿಬಾಳ, ಪರಶುರಾಮ ಅಗಡಿ, ಪ್ರವೀಣ ಗುತ್ತೂರ, ತುಮ್ಮಿನಕಟ್ಟಿಯ ಮಾರುತಿ ಬೆನಕನಕೊಂಡ, ಶಿವಣ್ಣ, ಗುರುಮೂರ್ತಿ ಬಂಡಾರೆ, ಭರಮಪ್ಪ ಹಳ್ಳಿ, ಗುತ್ತಲ ಈಶಣ್ಣ, ಸಮಾಜದ ಹಿರಿಯರು ವೇದಿಕೆಯಲ್ಲಿ ಭಾಗವಹಿಸಿದ್ದರು.
ಸಿದ್ದಪ್ಪ ಬಸಲಿ ಸ್ವಾಗತಿಸಿ, ವಂದಿಸಿದರು. ವಿನಾಯಕ ಮತ್ತು ಪ್ರತಿಭಾ ಸಂಗಡಿಗರು ಪ್ರಾರ್ಥಿಸಿದರು.