ಹರಿಹರ, ಜೂ.27- ಎಪಿಎಂಸಿ ಆವರಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ರಾಜ್ಯ ಸರ್ಕಾರದ ಕಲಿಕಾ ನಿರ್ವಹಣೆ ವ್ಯವಸ್ಥೆ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸ್ಯಾಮ್ಸಂಗ್ ಟ್ಯಾಬ್ಲೆಟ್ ಪಿಸಿ ಉಪಕರಣಗಳನ್ನು ಶಾಸಕ ಎಸ್.ರಾಮಪ್ಪ ವಿತರಿಸಿದರು. ನಂತರ ಮಾತನಾಡಿದ ಶಾಸಕರು, ಈ ಕ್ಯಾಂಪಸ್ನಲ್ಲಿ ಸುಮಾರು 1 ಸಾವಿರ ವಿದ್ಯಾರ್ಥಿಗಳಿದ್ದು, ಜೊತೆಗೆ 3 ಹಾಸ್ಟೆಲ್ಗಳಿವೆ. ಇಲ್ಲಿಗೆ ಅವಶ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರವೇ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಪಾಲಿಟೆಕ್ನಿಕ್ ಪ್ರಾಚಾರ್ಯ ಶಿವಕುಮಾರ ಸ್ವಾಮಿ ಮಾತನಾಡಿ, ಕಾಲೇಜಿನ 420 ವಿದ್ಯಾರ್ಥಿಗಳಿಗೆ ಟ್ಯಾಬ್ ಮಂಜೂರಾಗಿವೆ. ಆನ್ಲೈನ್ ಬೋಧನೆ, ಕಲಿಕೆಗೆ ಈ ಉಪಕರಣ ಉಪಯೋಗವಾಗಲಿದೆ ಎಂದು ಹೇಳಿದರು.
ಪಾಲಿಟೆಕ್ನಿಕ್ನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಎಲ್.ವಿ.ಗಿರೀಶ್, ಶಾಂತಕುಮಾರ್ ನಾಯ್ಕ್, ಬಿ.ಪ್ರಕಾಶ್, ಕಚೇರಿ ಅಧೀಕ್ಷಕ ವಿಜಯಕುಮಾರ್, ನಜೀರ್ ಹುಸೇನ್ ಈ ವೇಳೆ ಹಾಜರಿದ್ದರು.