ಅಜ್ಞಾನ, ಅಂಧಕಾರದಿಂದ ಹೊರಬನ್ನಿ

ಜಿಗಳಿಯಲ್ಲಿ ಸತ್ಯಶಿವರಾತ್ರಿ ಕಾರ್ಯಕ್ರಮದಲ್ಲಿ ಬಿ.ಕೆ. ಮಂಜುಳಾಜೀ

ಮಲೇಬೆನ್ನೂರು, ಮಾ.24- ಅಜ್ಞಾನ, ಅಂಧಕಾರವನ್ನು ಮನಸ್ಸಿನಿಂದ ದೂರ ಮಾಡಿಕೊಂಡು, ಜ್ಞಾನದ ದೀಪವನ್ನು ಬೆಳಗಿಸಿಕೊಂಡು ತಮ್ಮನ್ನು ತಾವು ಅರಿತುಕೊಳ್ಳುವುದೇ ಸತ್ಯ ಶಿವರಾತ್ರಿ ಆಚರಣೆಯ ಉದ್ದೇಶವಾಗಿದೆ ಎಂದು ರಾಜಯೋಗಿನಿ ಬಿ.ಕೆ. ಮಂಜುಳಾಜೀ ಹೇಳಿದರು.

ಅವರು ಜಿಗಳಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಮಲೇಬೆ ನ್ನೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲ ಯದ ವತಿಯಿಂದ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಪರಮಾತ್ಮ ಶಿವನು ಮನುಷ್ಯರಾದ ನಮಗೆ ಸತ್ಯ ಜ್ಞಾನವನ್ನು ನೀಡಿ, ಆತ್ಮ ಕಲ್ಯಾಣವನ್ನು ಮಾಡುತ್ತಿದ್ದಾನೆ. ಪ್ರಸ್ತುತ ದಿನಮಾನದಲ್ಲಿ ಎಲ್ಲರಿಗೂ ಒತ್ತಡ ಹೆಚ್ಚಾಗುತ್ತಿದ್ದು, ಅದರಿಂದ ಹೊರಬರಲು ರಾಜಯೋಗದಲ್ಲಿ ಭಾಗವಹಿಸಿ ಅಥವಾ ಭಗವಂತನ ಧ್ಯಾನ ಮಾಡಿ ಎಂದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿ, ಜಗತ್ತಿನಲ್ಲಿ ಶಾಂತಿ ನೆಲೆಸಲು ಈಶ್ವರೀಯ ವಿಶ್ವವಿದ್ಯಾಲಯವು ತನ್ನದೇ ಆದ ಸೇವೆ ಸಲ್ಲಿಸುತ್ತಿದ್ದು,
ಜನರಿಗೆ ಪರಮಾತ್ಮನ ಬಗ್ಗೆ ತಿಳಿಸಿ, ಎಲ್ಲರೂ ಭಗವಂತನ ಸ್ಮರಣೆ ಮಾಡಿ ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳುವಂತೆ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ನೂತನ ಅಧ್ಯಕ್ಷೆ ಶ್ರೀಮತಿ ಕರಿಯಮ್ಮ, ಸದಸ್ಯರಾದ ಎನ್.ಎಂ. ಪಾಟೀಲ್‌, ಕೆ.ಜಿ. ಬಸವರಾಜ್, ವೈ.ಆರ್‌. ಚೇತನ್‌ಕುಮಾರ್‌, ಶ್ರೀಮತಿ ವಿನೋದಮ್ಮ ಜಿ.ಆರ್‌. ಹಾಲೇಶ್‌ಕುಮಾರ್‌, ಶ್ರೀಮತಿ ಕವಿತಾ ಮಾಕನೂರು ಶಿವು, ಶ್ರೀಮತಿ ರೇಣುಕಮ್ಮ ಪೂಜಾರ್‌ ನಾಗರಾಜ್, ಶ್ರೀಮತಿ ಮಂಜುಳಾ ಸಿ. ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು.

ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್‌.ಎಸ್‌. ರುದ್ರಯ್ಯ ಅವರು ಈಶ್ವರೀಯ ವಿಶ್ವವಿದ್ಯಾಲಯದ ಬಗ್ಗೆ ತಿಳಿಸಿದರು. 

ಗ್ರಾಮದ ಹಿರಿಯರಾದ ಕೊಟ್ರಯ್ಯ, ಕೆ. ಷಣ್ಮುಖಪ್ಪ,
ಕೆ. ಸ್ವಾಮಿಲಿಂಗಪ್ಪ, ಬಿ.ಎಂ. ದೇವೇಂದ್ರಪ್ಪ, ಕೆ.ಆರ್‌. ರಂಗಪ್ಪ, ಮುದ್ದಪ್ಳ ಈಶ್ವರಪ್ಪ, ಮುದ್ದಪ್ಳ ಶಿವಶಂಕರ್‌, ಪಿಎಸಿಎಸ್‌ ಸಿಇಓ ಎನ್‌.ಎನ್‌. ತಳವಾರ್‌, ಕೆ.ಎಸ್‌. ನಂದ್ಯೆಪ್ಪ, ಯಲವಟ್ಟಿಯ ನಾಗರಾಜಪ್ಪ ಮತ್ತಿತರರು ಭಾಗವಹಿಸಿದ್ದರು.

ಪತ್ರಕರ್ತ ಪ್ರಕಾಶ್‌ ಸ್ವಾಗತಿಸಿದರು. ಬಿ.ಕೆ. ಸಾವಿತ್ರಕ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಜ್ಯೋತಿರ್ಲಿಂಗಗಳ ಮೆರವಣಿಗೆ ಮತ್ತು ಶಾಂತಿಯಾತ್ರೆ ನಡೆಯಿತು. ಡೊಳ್ಳು ಕುಣಿತ ಮೆರವಣಿಗೆಗೆ ಮೆರಗು ತಂದಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!