ದಾವಣಗೆರೆ, ಮಾ.23- ಮೂಲ ಭೂತ ಅವಶ್ಯಕತೆಗಳಲ್ಲಿ ನೀರು ಬಹು ಮುಖ್ಯ ಪಾತ್ರ ವಹಿಸುತ್ತದೆ. ಈ ಜಲವೇ ನಮಗೆ ಶಕ್ತಿ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ವ್ಯವಹಾರವಾಗಿ ನೀರನ್ನು ಬಳಸುತ್ತಿರುವುದು ದುರದೃಷ್ಟಕರ ಹಾಗೂ ವಿಷಾದನೀಯ ಸಂಗತಿ ಎಂದು ಪ್ರಾಚಾರ್ಯ ಡಾ. ಬಿ.ಎಲ್.ಸಂತೋಷ್ ಹೇಳಿದರು.
ನಗರದ ಮಹೇಶ್ ಪಿ.ಯು.ಕಾಲೇಜಿ ನಲ್ಲಿ `ವಿಶ್ವ ಜಲ ಸಂರಕ್ಷಣಾ’ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ನೀರಿನ ಸೆಲೆಗಳಾದ ಕೆರೆ, ಬಾವಿ, ನದಿ, ಹಳ್ಳಗಳಲ್ಲಿ ನೀರು ಸಂಗ್ರಹಿಸಿ, ಅಂತರ್ಜಲ ಹೆಚ್ಚಿಸಲು ಕರೆ ನೀಡಿದರು.
ತರಳಬಾಳು ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್.ದೇವರಾಜ್ ಮಾತನಾಡಿ, ಕೃಷಿನ ಮೂಲಾಧಾರಗಳಲ್ಲಿ ಜಲವೇ ಪ್ರಮುಖ ಅಂಶ. ಜಲ ಕೃಷಿಯೇ ಭವಿಷ್ಯದ ಜೀವಾಳ. ನೀರಿನ ಬೆಲೆ ಕಟ್ಟಬೇಕಿದೆ. ಇಲ್ಲದಿದ್ದರೆ ಜೀವದ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ವಿಸ್ತರಣಾಧಿಕಾರಿ ರಘುರಾಜು, ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ಹೆಚ್.ಎಂ.ಶಶಿಧರಯ್ಯ ನಿರೂಪಿಸಿದರು. ಎ.ಎಡ್ವಿನ್ ಸ್ವಾಗತಿಸಿದರು.
ಬಿ.ಯು.ರೂಪ ವಂದಿಸಿದರು.