ವಿಜ್ಞಾನದ ಸಂಶೋಧನೆಗಳು ಉಪಯುಕ್ತವಾಗಲಿ

ಉಪನ್ಯಾಸಕ ಅಂಗಡಿ ಸಂಗಪ್ಪ

ದಾವಣಗೆರೆ, ಮಾ.22- ಜೀವ ಸಂಕುಲದ ಸುಸ್ಥಿರ ಜೀವನಕ್ಕಾಗಿ ವಿಜ್ಞಾನದ ಸಂಶೋಧನೆಗಳು ಉಪಯುಕ್ತವಾಗಲಿ ಎಂದು ಉಪನ್ಯಾಸಕ ಅಂಗಡಿ ಸಂಗಪ್ಪ ಆಶಿಸಿದರು. 

ದಾವಣಗೆರೆ ಜೆ.ಹೆಚ್‌. ಪಟೇಲ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ 28ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ವಿಜ್ಞಾನದ ಸಂಶೋಧನೆಗಳು ಇರುವುದೇ ಜೀವ ಸಂಕುಲದ ಸುಸ್ಥಿರ ಜೀವನಕ್ಕಾಗಿ. ಆದರೆ ಮಾನವ ತನ್ನ ದುರಾಸೆಯ ನಡವಳಿಕೆಗಳಿಂದ ಈ ವಿಜ್ಞಾನ ಆವಿಷ್ಕಾರಗಳನ್ನು ಸ್ವಾರ್ಥಕ್ಕೆ ಬಳಸಿ ಪರಿಸರ ಹಾಗೂ ಜೀವಿಗಳ ಸಂಕುಲಕ್ಕೆ ಅಪಾಯ ತಂದೊಡ್ಡಿದ್ದಾನೆ ಎಂದು ಹೇಳಿದರು.

ಮಾನವ ನಿರ್ಮಿತ ಪರಿಸರ ಸಂಬಂಧಿ ಸಮಸ್ಯೆಗಳು ಭೂ ಮಾಲಿನ್ಯದಿಂದಾಗಿ ಇಂದು ಅಂತರಿಕ್ಷ ಮಾಲಿನ್ಯಗೊಳಿಸುವ ಮಟ್ಟಕ್ಕೆ ಬೆಳೆದಿವೆ ಎಂದರು.

ನಿವೃತ್ತ ಶಿಕ್ಷಕಿ ಆರ್‌. ವಾಗ್ದೇವಿ, ಎಲ್‌.ಎಂ.ಕೆ. ಸೆರಾಮಿಕ್ಸ್‌ನ ಎಲ್‌.ಎಂ. ವಾಗೀಶ್‌, ದಾವಣಗೆರೆ ಸೈಂಟಿಫಿಕ್‌ ಸಪ್ಲೈಯರ್‌ ಮಾಲೀಕರಾದ ಗಿರೀಶ್‌, ಜೆ.ಹೆಚ್‌. ಪಟೇಲ್‌ ಕಾಲೇಜಿನ ಪ್ರಾಚಾರ್ಯರಾದ ಪ್ರತಿಭಾ ಪಿ. ದೊಗ್ಗಳ್ಳಿ, ಕ.ರಾ.ವಿ.ಪ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಉಪಸ್ಥಿತರಿದ್ದರು. ಜಿಲ್ಲಾ ಬಾಲ ವಿಜ್ಞಾನಿಯಾಗಿ ಚೇತನ ಒಲಂಪಿಯಾಡ್‌ ಶಾಲೆಯ ಆಪ್ತ ಶೆಟ್ಟಿ ಆಯ್ಕೆಯಾಗಿದ್ದಾರೆ.

error: Content is protected !!