ದಾವಣಗೆರೆ, ಮಾ. 22- ಕರ್ನಾಟಕ ರಾಜ್ಯದ ಕುರುಹಿನಶೆಟ್ಟಿ ಸಮಾಜದ ಉದಯೋನ್ಮುಖ ಗಾಯಕ-ಗಾಯಕಿಯರಿಗಾಗಿ ಶ್ರೀ ನೀಲಕಂಠೇಶ್ವರ ಕಲಾ, ಸಾಂಸ್ಕೃತಿಕ, ಕ್ರೀಡಾ ವೇದಿಕೆ ಆಶ್ರಯದಲ್ಲಿ ಚನ್ನಗಿರಿ ವಿರೂಪಾಕ್ಷಪ್ಪ ಸಭಾಂಗಣದಲ್ಲಿ ರಾಜ್ಯಮಟ್ಟದ ಸಂಗೀತ ಗಾಯನೋತ್ಸವ ಸ್ಪರ್ಧೆ ಏರ್ಪಡಿಸಲಾಗಿತ್ತು.
ರಮೇಶ ಜಂಬಣ್ಣ ಗಣಪಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಆಯೋಜಕರೂ, ವೇದಿಕೆಯ ಅಧ್ಯಕ್ಷರೂ ಆದ ನಾಗರಾಜ್ ಭಂಡಾರಿ, ಶ್ರೀನಿವಾಸ್ ಇಂಡಿ, ಎಸ್.ಐ. ವಿನಯ್, ಎಸ್. ಅಮಿತಾ, ಅಶೋಕ್ ರಾಜ್, ಕೆ.ಸಿ. ಕೇಶವ ಮೂರ್ತಿ, ರೇಖಾ ಶಾವಿ , ಅಣ್ಣಪ್ಪ ಭಾರತೀ ಶಾವಿ, ಪ್ರಶಾಂತ್ ಇಂಡಿ, ಗಣೇಶ್ ಮಂಜುನಾಥ್ ಶಾವಿ, ಯಲ್ಲಪ್ಪ ಇಂಡಿ, ಕೃಷ್ಣಪ್ಪ ಬೆನ್ನೂರು, ಉಮಾರಾಣಿ, ವಿನಾಯಕ ರಾಂಪುರ ಹಾಗೂ ಹಗರಿಬೊಮ್ಮನಹಳ್ಳಿ ಸಮಾಜದ ಮುಖಂಡರು ಗಾಯನೋತ್ಸವಕ್ಕೆ ಚಾಲನೆ ನೀಡಿದರು.
ಬಾಗಲಕೋಟೆ ಜಿಲ್ಲೆ, ರಬಕವಿ ಬನಹಟ್ಟಿ ತಾಲ್ಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು ಸಾಹಿತಿ ಮಾ. ಕೃ. ಮಹಲಿಂಗ ಮೆಗಾಡಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ರನಟ, ಜಾನಪದ ಗಾಯಕರಾದ ಗುರುರಾಜ್ ಹೊಸಕೋಟೆ ಉಪಸ್ಥಿತರಿದ್ದು ಮಾತನಾಡಿದರು.
ಗದಗ-ಬೆಟಗೇರಿ ನೀಲಕಂಠ ಮಠದ ನಾಲ್ವಡಿ ಶ್ರೀ ನೀಲಕಂಠ ಪಟ್ಟದಾಯ್ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಿರುತೆರೆ ಹಾಸ್ಯ ಕಲಾವಿದ ದಾನಪ್ಪ ಮೂಡಲಗಿ, ದಾವಣಗೆರೆ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ರಮೇಶ್ ಗಣಪಾ, ಮಾಜಿ ಸಚಿವ ಮಾತಗೊಂಡ ಮಲ್ಲಿಕಾರ್ಜುನ ನಾಗಪ್ಪ, ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಅಂಬಾದಾಸ್ ಕಾಮೂರ್ತಿ, ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ್, ಮಾತಗೊಂಡ ರವೀಂದ್ರನಾಥ್, ಸರ್ವೇಶ್ ಮಲ್ಲಿಕಾರ್ಜುನ ನಾಗಪ್ಪ, ಕರ್ನಾಟಕ ಬಾಲವಿಕಾಸ ಅಕಾಡೆಮಿ ರಾಜ್ಯ ಅಧ್ಯಕ್ಷರಾದ ಈರಣ್ಣ ಜಡಿ, ಬಸವರಾಜ್ ಇಂಡಿ, ಮಲ್ಲಿಕಾರ್ಜುನ ಪೋಲಕಲ್ ರಬಕವಿ ಬನಹಟ್ಟಿ ತಾಲ್ಲೂಕು ಕ ಸಾ ಪ ಅಧ್ಯಕ್ಷ ಮಾ. ಕೃ. ಮೆಗಾಡಿ, ಆರ್. ಹೆಚ್. ನಾಗಭೂಷಣ್, ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಮಾಜಿ ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಗದಗ ಬೆಟಗೇರಿ ಹಾಗು ಹುಬ್ಬಳ್ಳಿ ಸಮಾಜದ ಅಧ್ಯಕ್ಷರು ಹಾಗೂ ಮುಖಂಡರುಗಳು ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಆಕರ್ಷಕ ನೆನಪಿನ ಕಾಣಿಕೆ, ಪ್ರೋತ್ಸಾಹ ಪ್ರಮಾಣ ಪತ್ರ ನೀಡಲಾಯಿತು.