ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡಿ : ಎಸ್ಸೆಸ್

ದಾವಣಗೆರೆ, ಜೂ.20- ನಮ್ಮ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಮಾಡಿದರೆ, ನಮಗೆ ಒಳ್ಳೆಯದಾಗುತ್ತದೆ ಎಂದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.

ನಗರದ ಸಮೀಪದ ಬಾಡಾ ಕ್ರಾಸ್ ಬಳಿಯ ಶ್ರೀ ವೀರೇಶ್ವರ ಪುಣ್ಯಾಶ್ರಮ ದಲ್ಲಿ ತಮ್ಮ 90ನೇ ವರ್ಷದ ಜನ್ಮದಿನದ ಅಂಗವಾಗಿ ಬಡ ಕಲಾವಿದರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. 

ದಾನ ಮಾಡುವುದಕ್ಕೆ ನನ್ನ ತಾಯಿಯೇ ಪ್ರೇರಣೆ ಎಂದು ಭಾವುಕರಾಗಿ ನುಡಿದ ಎಸ್ಸೆಸ್, ಹೆಬ್ಬಾಳು ಮಠದಲ್ಲಿ ಅರ್ಧಕ್ಕೆ ನಿಂತಿದ್ದ ಪ್ರೌಢಶಾಲೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಧನ ಸಹಾಯ ನೀಡುವ ಮೂಲಕ ನಾನು ದಾನ ಮಾಡಲು ಆರಂಭಿಸಿದೆ ಎಂದು ತಮ್ಮ ನೆನಪಿನ ಬುತ್ತಿ ಬಿಚ್ಚಿದರು.

ಆಶ್ರಮದ ಅಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ಆಶ್ರಮದಲ್ಲಿ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಶಿಲಾಮಂಟಪ ನಿರ್ಮಾಣವಾಗಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆ ಗೊಳ್ಳಲಿದೆ ಎಂದು ಹೇಳಿದರು. 

ಆಶ್ರಮದ ಕಾರ್ಯದರ್ಶಿ
ಎ.ಹೆಚ್.ಶಿವಮೂರ್ತಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಆಶ್ರಮದ ಸಹ ಕಾರ್ಯದರ್ಶಿ ಜೆ.ಎನ್.ಕರಿಬಸಪ್ಪ, ನಿರ್ದೇಶಕ ಬಸವನ ಗೌಡ, ದಾನಿ ನಾಗರತ್ನಮ್ಮ, ಹಿರಿಯ ಪತ್ರಕರ್ತ ಬಕ್ಕೇಶ್‌ ನಾಗನೂರು, ಸೇವಾಕರ್ತ ರಾದ ಸಿದ್ದಲಿಂಗೇಶ್, ಮಂಜಣ್ಣ, ಶಿವಬಸಯ್ಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!