ಕಾಮಗಾರಿ ಅವ್ಯವಹಾರ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ, ಮಾ.21- ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಲ್ಲಿ ನಡೆದ ಅವ್ಯವ ಹಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ  ಹೂಡಬೇಕು ಹಾಗೂ 60 ಕೆರೆ ನೀರು ತುಂಬಿಸುವ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಒತ್ತಾಯಿಸಿ ವಿವಿಧ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ  ಎ.ಐ.ಕೆ.ಎಸ್ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ ಮಾತನಾಡಿ, ಹರಪನಹಳ್ಳಿ ತಾಲ್ಲೂಕು ಡಾ|| ನಂಜುಂಡಪ್ಪನವರ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕಾಗಿದ್ದು, ಇಲ್ಲಿನ ಜನತೆಗೆ ಕೃಷಿಯೇ ಜೀವನಾಧಾರ.ಮಳೆಯನ್ನೇ ನಂಬಿರುವ ಜನರಿಗೆ ಮಾಜಿ ಸಿ.ಎಂ. ದಿ. ನಿಜಲಿಂಗಪ್ಪನವರು ನೀರುಣಿಸುವ  ಕನಸು ಕಂಡಿದ್ದರು.  1998 ರಿಂದಲೇ ರೈತ ಪರ ಸಂಘಟನೆಗಳು ದಿ. ಎಂ.ಪಿ. ರವೀಂದ್ರರವರ ಹೋರಾಟದ ಪ್ರತಿಫಲದಿಂದ ತುಂಗಭದ್ರಾ ನದಿಯ ಗರ್ಭಗುಡಿ ಪಿಕಪ್ ಕಂ ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ ದೊರೆತದ್ದು ಸತ್ಯ.

ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಥಗಿತಗೊಂಡ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ತುಂಗಭದ್ರಾ ನದಿಯ ದಡದಲ್ಲಿ ಕಟ್ಟು ತ್ತಿರುವ ಪಿಕಪ್ ಕಂ ಬ್ರಿಡ್ಜ್ ಕಾಮಗಾರಿ ಯನ್ನು ಪೂರ್ಣಗೊಳಿಸಿ ತಾಲ್ಲೂಕಿನ ಸಮಗ್ರ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಬಳ್ಳಾರಿ ಜಿಲ್ಲೆ ಸಿಪಿಐ ಕಾರ್ಯದರ್ಶಿ ನಾಗಭೂಷಣ್ ರಾವ್, ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸಹ ಕಾರ್ಯದರ್ಶಿಗಳಾದ  ಹೆಚ್.ಎಂ. ಸಂತೋಷ್, ರಮೇಶ್‍ನಾಯ್ಕ, ವಿವಿಧ ಸಂಘಟನೆಗಳ ಬಳಿಗಾ ನೂರು ಕೊಟ್ರೇಶ್, ಚಂದ್ರನಾಯ್ಕ, ಸುಮ, ಎಸ್. ನಾಗರಾಜಪ್ಪ, ಪುಷ್ಪ, ವಿಶಾಲಮ್ಮ , ಮತ್ತಿಹಳ್ಳಿ  ತಿಂದಪ್ಪ, ಎ.ಡಿ. ದ್ವಾರಕೇಶ್  ಇನ್ನಿತರರಿದ್ದರು.

error: Content is protected !!