ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ದಾವಣಗೆರೆ, ಮಾ.21- ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಶಾಸಕರ ಅನುದಾನದಲ್ಲಿ 17 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಾಸಕ ಎಸ್.ಎ. ರವೀಂದ್ರನಾಥ್ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರುಗಳು ಭೂಮಿ ಪೂಜೆ ನೆರವೇರಿಸುವ ಮುಖೇನ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ತಾಲ್ಲೂಕಿನ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ 76ರ ರಸ್ತೆಯ ಆಯ್ದ ಭಾಗಗಳಲ್ಲಿ 9.88 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ದೊಡ್ಡಬಾತಿ ಗ್ರಾಮದ ಹಳೇ ಪಿ.ಬಿ. ರಸ್ತೆಯಿಂದ ಪಬ್ಲಿಕ್ ಮಂದಾರ ಶಾಲೆ ಮುಖಾಂತರ ಭದ್ರಾ ಶುಗರ್ ಫ್ಯಾಕ್ಟರಿ ರಸ್ತೆಗೆ ಕೂಡುವ ರಸ್ತೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ, 50 ಲಕ್ಷ ರೂ. ವೆಚ್ಚದಲ್ಲಿ ಬಸಾಪುರ ಗ್ರಾಮದಿಂದ ರಾಂಪುರಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, 50 ಲಕ್ಷ ರೂ. ವೆಚ್ಚದಲ್ಲಿ ಬಸವನಾಳು ಗ್ರಾಮದ ಗೊಲ್ಲರಹಟ್ಟಿಯಿಂದ ಚಾನಲ್ ರಸ್ತೆ ಮುಖಾಂತರ ಲಿಂಗದಹಳ್ಳಿಗೆ ಹೋಗುವ ರಸ್ತೆ ಅಭಿವೃದ್ದಿ, 50 ಲಕ್ಷ ರೂ. ವೆಚ್ಚದಲ್ಲಿ ಕೋಡಿಹಳ್ಳಿ ಆಶ್ರಯ ಕಾಲೋನಿಯಿಂದ ಗಂಗನರಸಿ ಗಡಿವರೆಗೆ ರಸ್ತೆ ಅಭಿವೃದ್ಧಿ, 50 ಲಕ್ಷ ವೆಚ್ಚದಲ್ಲಿ ಆವರಗೊಳ್ಳ ಗ್ರಾಮದಿಂದ ಬಾತಿ ಕೆರೆ ಚಾನಲ್‌ ರಸ್ತೆ ಮುಖಾಂತರ ಕಕ್ಕರಗೊಳ್ಳಕ್ಕೆ ಹೋಗುವ ರಸ್ತೆ ಅಭಿವೃದ್ಧಿ, 40 ಲಕ್ಷ ವೆಚ್ಚದಲ್ಲಿ ದೊಡ್ಡ ಓಬಜ್ಜಿಹಳ್ಳಿ-ಕೊಂಡಜ್ಜಿ ರಸ್ತೆಯಿಂದ ಬದಿಯಾನಾಯ್ಕನ ತಾಂಡಾಕ್ಕೆ ಹೋಗುವ ರಸ್ತೆ ಅಭಿವೃದ್ಧಿ, 50 ಲಕ್ಷ ವೆಚ್ಚದಲ್ಲಿ ಬಿ. ಕಲ್ಪನಹಳ್ಳಿ ಅಮೃತನಗರ -ಪುಟಗನಾಳು ರಸ್ತೆಗೆ ಕೂಡುವ ರಸ್ತೆ ಅಭಿವೃದ್ದಿ ಕಾಮಗಾರಿ, 50 ಲಕ್ಷ ವೆಚ್ಚದಲ್ಲಿ ಕಕ್ಕರಗೊಳ್ಳ-ಕೋಡಿಹಳ್ಳಿ ರಸ್ತೆಯಿಂದ ಚಾನಲ್ ರಸ್ತೆ ಮುಖಾಂತರ ಗಂಗನರಸಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, 95 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತಿ ಆವರಣದಲ್ಲಿ ದುರಸ್ತಿ ಅಭಿವೃದ್ಧಿ ಕಾಮಗಾರಿ, 65 ಲಕ್ಷ ವೆಚ್ಚದಲ್ಲಿ ಹದಡಿ ರಸ್ತೆಯಿಂದ ಶಿರಮಗೊಂಡನಹಳ್ಳಿ ಚಾನಲ್‌ಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, 50 ಲಕ್ಷ ವೆಚ್ಚದಲ್ಲಿ ದೊಡ್ಡಬಾತಿ-ಹಳೇಬಾತಿ ಮುಖ್ಯ ರಸ್ತೆಯಿಂದ ಚಾನಲ್ ರಸ್ತೆ ಮುಖಾಂತರ ಹಳೇ ಕುಂದುವಾಡಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಶಾಲಾ ಕೊಠಡಿಗಳ ಉದ್ಘಾಟನೆ : ತಾಲ್ಲೂಕಿನ ದೊಡ್ಡಬಾತಿ ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ, ಪ್ರಾಥಮಿಕ ಮತ್ತು ಉರ್ದು ಶಾಲೆಯ ಶಾಲಾ ಕೊಠಡಿಗಳು, ಕಾಡಜ್ಜಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಗಳು, ಬಸವನಾಳು-ಗೊಲ್ಲರಹಟ್ಟಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 32 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿಗಳು ಉದ್ಘಾಟನೆಗೊಂಡವು.

error: Content is protected !!