ವಾರಿಯರ್ಸ್‌ಗಳಿಗೆ ಊಟ ವಿತರಣೆ

ಮಲೇಬೆನ್ನೂರು, ಜೂ.7- ಪಟ್ಟಣದ ಕೊರೊನಾ ವಾರಿಯರ್‌ಗಳಿಗೆ ಹರಿಹರ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ಇಂದು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.

ಪುರಸಭೆ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಪೌರ ಕಾರ್ಮಿಕರಿಗೆ, ನಾಡಕಚೇರಿಯ ಸಿಬ್ಬಂದಿಗಳಿಗೆ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮತ್ತು ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಮಂಜುನಾಥ್ ಊಟ ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಉಪ ತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾ ಧಿಕಾರಿ ದಿನಕರ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಪುರಸಭೆ ಅಧಿಕಾರಿಗಳಾದ ಉಮೇಶ್, ಪ್ರಭು, ಗುರುಪ್ರ ಸಾದ್, ನವೀನ್, ಮಾಜಿ ಸದಸ್ಯರಾದ ಎ. ಆರೀಫ್ ಅಲಿ, ಸುಬ್ಬಿ ರಾಜಪ್ಪ, ಭೋವಿ ಕುಮಾರ್, ಕುಂಬಳೂರು ವಾಸು, ಪತ್ರಕರ್ತರಾದ ಜಿಗಳಿ ಪ್ರಕಾಶ್, ಸದಾನಂದ್, ವಾಸವಿ ರಮೇಶ್ ಇನ್ನಿತರರಿದ್ದರು.

ಟೆಸ್ಟ್: ಪುರಸಭೆಯ ಸಿಬ್ಬಂದಿಗಳಿಗೆ ಮತ್ತು ಪೌರ ಕಾರ್ಮಿಕರಿಗೆ ಇಂದು ಕೊರೊನಾ ಟೆಸ್ಟ್‌ ಮಾಡಲಾಯಿತು. ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅಪೂರ್ವ  ಅವರು ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಸಲಹೆ ನೀಡಿದರು.

3 ಪಾಸಿಟಿವ್: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು 40 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಮೂವರಿಗೆ ಪಾಸಿಟಿವ್ ಬಂದಿದೆ. 46 ಜನರಿಗೆ ಕೋವಿಶೀಲ್ಡ್ ಲಸಿಕೆ ಹಾಕಿದ್ದೇವೆ ಎಂದು ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ತಿಳಿಸಿದ್ದಾರೆ.

ಸೋಂಕು ಇಳಿಕೆ: ಹರಿಹರ ತಾ.ನಲ್ಲಿ ಕೊರೊನಾ ಸೋಂಕು ಇಳಿಮುಖ ಆಗುತ್ತಿದ್ದು, ಸೋಮವಾರದ ವರದಿ ಪ್ರಕಾರ 19 ಜನರಿಗೆ ಸೋಂಕು ದೃಢಪಟ್ಟಿದೆ.

error: Content is protected !!