ಹೂವಿನಹಡಗಲಿ, ಮಾ. 18 – ಪಟ್ಟಣದ ಬಿಜೆಪಿ ವತಿಯಿಂದ ಕಿಸಾನ್ ಸಮ್ಮಾನ್ ಫಲಾನುಭವಿಗಳ ಸಭೆಯು ಸೋವೇನಹಳ್ಳಿ ಗ್ರಾಮದ ಶಿವನ ಕಟ್ಟೆ ದೇವಸ್ಥಾನದಲ್ಲಿ ಜರುಗಿತು
ಅಧ್ಯಕ್ಷತೆಯನ್ನು ಬಳ್ಳಾರಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಐ ನಾಥ ರೆಡ್ಡಿ ವಹಿಸಿದ್ದರು. ಉದ್ಘಾಟಕರಾಗಿ ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ವಹಿಸಿದ್ದರು.
ಜ್ಯೋತಿ, ಮಹೇಂದ್ರ, ಪೂಜಪ್ಪ, ಎಂ.ಬಿ. ಬಸವರಾಜ್, ಮಂಡಲ ಅಧ್ಯಕ್ಷ ಸಂಜೀವ ರೆಡ್ಡಿ, ಲಲಿತಾಬಾಯಿ ಅವರು ಕಿಸಾನ್ ಯೋಜನೆ ಮತ್ತು ಪ್ರಧಾನಮಂತ್ರಿಯವರ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಐ ನಾಥ ರೆಡ್ಡಿ ಮಾತನಾಡಿ, ಪಂಜಾಬ್ ಮತ್ತು ಹರಿಯಾಣದ ರೈತರು ಒಂದುವರೆ ತಿಂಗಳಿಂದ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ಮಾಡು ತ್ತಿರುವುದು ಖಂಡನೀಯ ಎಂದರು. ಸುಮಾರು 30 ರಾಜ್ಯಗಳು ಇರುವ ನಮ್ಮ ದೇಶದಲ್ಲಿ ಈ ಎರಡು ರಾಜ್ಯಕ್ಕೆ ಮಾತ್ರ ಕೃಷಿ ಕಾಯ್ದೆಗಳು ಕೆಟ್ಟದಾಗಿ ಕಾಣುತ್ತಿರುವುದು ರಾಜಕೀಯ ದುರು ದ್ದೇಶ ಎಂದು ಕಾಣುತ್ತಿದೆ. ಕೇಂದ್ರ ಸರ್ಕಾರದಿಂದ 6000 ರೂ. ಮತ್ತು ರಾಜ್ಯ ಸರ್ಕಾರದಿಂದ 4000 ರೂ. ಕೊಡುತ್ತಿರುವುದು ರೈತರಿಗೆ ಜೀವ ನೋಪಾಯಕ್ಕೆ ಅನುಕೂಲವಾಗಿದೆ ಎಂದರು.
ಕಾಂಗ್ರೆಸ್‌ನವರು 70 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಪ್ರತಿವರ್ಷ 125 ಸಾವಿರ ಕೋಟಿ ರೂಪಾಯಿಗಳನ್ನು ಪ್ರತಿವರ್ಷ ಅನುದಾನ ರೂಪದಲ್ಲಿ ಕೊಡುತ್ತಿರುವುದು ರೈತರ ಗಮನಕ್ಕೆ ಬಂದಿದೆ. ಈ ಹಣ ನೇರವಾಗಿ ರೈತರ ಖಾತೆಗೆ ತಲುಪುತ್ತಿದೆ. ಕೇಂದ್ರ ಸರ್ಕಾರವು ಆನ್‌ಲೈನ್ ಮಾರುಕಟ್ಟೆಯ ಜೊತೆಗೆ ಹಳೆಯ ಮಾರುಕಟ್ಟೆಯ ವ್ಯವಸ್ಥೆಯನ್ನು ಮುಂದುವರೆಸುತ್ತದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸನಗೌಡ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಯಾವ ಯಾವ ಯೋಜನೆಗಳನ್ನು ಕೊಟ್ಟಿ ದ್ದಾರೆ ಎಂಬುದನ್ನು ಸರಳವಾಗಿ ಹೇಳಿದರು.
ಬಿಜೆಪಿ ತಾಲ್ಲೂಕು ಘಟಕದ ವಕ್ತಾರ ಡಾ|| ಲಕ್ಷ್ಮಣ್ ಲಮಾಣಿ ಉಜ್ವಲ ಯೋಜನೆ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ಅರಣ್ಯದ ಅಭಿವೃದ್ಧಿ ಬಗ್ಗೆ ಮಾತನಾಡಿದರು.
ಎಂ. ಶಿವನಗೌಡ, ಎಂ.ಬಿ. ಬಸಣ್ಣ, ತಾಲ್ಲೂಕು ಅಧ್ಯಕ್ಷ ಸಂಜೀವ ರೆಡ್ಡಿ, ಪೂಜಪ್ಪ, ಜ್ಯೋತಿ, ಮಹೇಂದ್ರ, ಜಿ. ಪಂ. ಸದಸ್ಯೆ ಲಲಿತಾ ಬಾಯಿ, ಸ್ವಾಮಿ ನಾಯಕ್, ದೊಡ್ಡ ಬಸನಗೌಡ ಗೌಡಗೇರಿ, ತಾಲ್ಲೂಕು ಪಂಚಾಯತಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.