ಹರಿಹರ : ಗ್ರಾ.ಪಂ. ಸದಸ್ಯರುಗಳಿಗೆ ತರಬೇತಿ

ಹರಿಹರ, ಮಾ.18- ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಹರಿಹರ ತಾಲ್ಲೂಕು ಯಲವಟ್ಟಿ, ಹಾಲಿವಾಣ ಹಾಗೂ ಎಳೆಹೊಳೆ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳಿಗೆ ಐದು ದಿನಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರವನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು.

ತರಬೇತಿ ಸಂಯೋಜಕರಾಗಿ ಆಗಮಿಸಿದ್ದ ಹೆಚ್.ಕೆ. ಶೋಭಾ ಮಾತನಾಡಿ, ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರ ಪಾತ್ರ ಬಹಳ ಮುಖ್ಯವಾದದ್ದು ಎಂದು ತಿಳಿಸಿದರು. ಸದಸ್ಯ ರಿಗೆ ಪಂಚಾಯತ್ ರಾಜ್ ಕಾಯ್ದೆ ಹಾಗೂ ಪಂ ಚಾಯ್ತಿ ನಡೆದು ಬಂದ ದಾರಿ, ರಚನೆ, ಜವಾಬ್ದಾರಿ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.

ಯಲವಟ್ಟಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಮನಗೌಡ ಮಾತನಾಡಿ, ಅಭಿವೃದ್ಧಿ ನಿಟ್ಟಿನಲ್ಲಿ ಸದಸ್ಯರು ಹಾಗೂ ನಾವುಗಳು ಸಮನ್ವ ಯತೆಯಿಂದ ಕೆಲಸ ಮಾಡಬೇಕು ಎಂದರಲ್ಲದೆ, ಯೋಜನೆಗಳ ಕುರಿತು ಮಾಹಿತಿ ನೀಡಿದರು. ಹಾಲಿವಾಣ ಪಿಡಿಒ ರಮೇಶ್ ವಸತಿ ಯೋಜನೆ ಗಳು, ನರೇಗ ಯೋಜನೆಗಳ ಕುರಿತು ತಿಳಿಸಿದರು.

ಕಾರ್ಯಾಗಾರದಲ್ಲಿ ಸುಗಮಗಾರರಾದ ಚಂದ್ರಮ್ಮ ಹಾಗೂ ಯಲವಟ್ಟಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಾಲಿವಾಣ ಅಧ್ಯಕ್ಷರಾದ ರಂಗನಾಥ ಹಾಗೂ ಎಳೆಹೊಳೆ ಅಧ್ಯಕ್ಷ ವೀರೇಂದ್ರ ಮತ್ತು ಮೂರು ಗ್ರಾಮಗಳ ಪಂಚಾಯ್ತಿ ಉಪಾಧ್ಯಕ್ಷರು, ಸದಸ್ಯರು ಮತ್ತು ಎಳೆಹೊಳೆ ಪಿಡಿಒ ಅರವಿಂದ್, ಕಾರ್ಯದರ್ಶಿ ಎಳೆಹೊಳೆ ರಘು, ಹಾಲಪ್ಪ, ಶಿವಪ್ಪ ಬಿರಾದಾರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!