ದಾವಣಗೆರೆ, ನ. 11 – ನಗರದಲ್ಲಿ ಕಿಯಾ ಕಾರಿನ ಶೋ ರೂಂ ಆದ ಜಾನ್ಸಿ ಕಿಯಾ ಅನ್ನು ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಂದು ಉದ್ಘಾಟಿಸಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ವಿಜಯೇಂದ್ರ ಅವರ ಮಗಳ ಹೆಸರಿನಲ್ಲಿ ಜಾನ್ಸಿ ಕಿಯಾ ಶೋ ರೂಂ ಹೆಸರಿಡಲಾಗಿದೆ. ರಾಜಕೀಯದ ಜನ ಉದ್ಯಮ ಗಳಿಗೆ ಬಂದಿರುವುದು ಮುಖ್ಯ. ರಾಜಕೀಯಕ್ಕಿಂತ ಹೆಚ್ಚಾಗಿ ಕೈಗಾರಿ ಕೆಗಳಲ್ಲಿ ಹೆಸರು ಮಾಡಿ ಬಂದರೆ ವ್ಯವಹಾರಕ್ಕೆ ಕಳೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಅವರು ಕಾರೊಂದನ್ನು ಖರೀದಿಸುವ ಮೂಲಕ ಶೋ ರೂಂಗೆ ಶುಭ ಹಾರೈಸಿದರು.
ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ವರ್ಷದ ಹಿಂದೆ ಶಿವಮೊಗ್ಗದಲ್ಲಿ ಜಾನ್ಸಿ ಕಿಯಾ ಶೋರೂಂ ಉದ್ಘಾಟನೆಯಾಗಿತ್ತು. ಈಗ ದಾವಣಗೆರೆಯಲ್ಲೂ ಉದ್ಘಾಟನೆಯಾಗುತ್ತಿದೆ. ಕಾರುಗಳಿಗೆ ಕಂಪನಿಯ ನಿರೀಕ್ಷೆ ಮೀರಿ ಬೇಡಿಕೆ ಬರುತ್ತಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಿಯಾ ಪ್ರಪಂಚದಲ್ಲೇ ಉತ್ತಮ ಕಾರುಗಳನ್ನು ಉತ್ಪಾದಿಸುತ್ತಿದೆ. ಕರ್ನಾಟಕದಲ್ಲಿ ಕಂಪನಿಯು 21 ಶೋ ರೂಂ ಹೊಂದಿದ್ದು, ಈಗ ದಾವಣಗೆರೆಗೂ ಕಾಲಿರಿಸಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಜಾನ್ಸಿ ಕಿಯಾದ ಎಕ್ಸಿಕ್ಯೂಟಿವ್ ಮ್ಯಾನೇಜರ್ ಬಿ.ಆರ್. ಸುಭಾಷ್, ಕಿಯಾದ ಪ್ರಾಂತೀಯ ವ್ಯವಸ್ಥಾಪಕ ಜಿನ್ ಹೊ ಪಾರ್ಕ್, ಉದ್ಯಮಿಗಳಾದ ಎಸ್.ಬಿ. ಅಭಿಷೇಕ್, ಜೆ.ಈಶ್ವರ ಸಿಂಗ್ ಕವಿತಾಳ ಮತ್ತಿತರರು ಉಪಸ್ಥಿತರಿದ್ದರು.