ಕುಂದುವಾಡ ಪ್ರೀಮಿಯರ್ ಲೀಗ್ ಕ್ರಿಕೆಟ್: ಪವರ್ ಫೈಟರ್ಸ್ ಚಾಂಪಿಯನ್

ದಾವಣಗೆರೆ, ಮಾ.17- ನಗರದ ಹಳೇ ಕುಂದು ವಾಡದ ಶಿಬಾರ ಸ್ಟೇಡಿಯಂ ನಲ್ಲಿ ನಡೆದ ಕುಂದುವಾಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದ ಫೈನಲ್ ನಲ್ಲಿ‌ ಪವರ್ ಫೈಟರ್ಸ್ ತಂಡ ಗೆಲುವು ಪಡೆಯಿತು.

ಮನಾ ಯುವ ಬ್ರಿಗೇಡ್, ಜರವೇ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ಐಪಿಎಲ್ ಮಾದರಿ ಯಲ್ಲಿ ಕುಂದುವಾಡ ಪ್ರೀಮಿಯರ್ ಲೀಗ್ ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಫೈನಲ್ ಗೆ ಪವರ್ ಫೈಟರ್ಸ್ ಹಾಗೂ ಟೀಮ್ ಖುಷಿ ಕ್ರಿಕೆಟರ್ಸ್ ಅರ್ಹತೆ ಪಡೆದಿದ್ದವು. 

ಐದು ರನ್ ಗಳಿಂದ ಟೀಮ್ ಖುಷಿ ಕ್ರಿಕೆಟರ್ಸ್ ಸೋಲನ್ನು ಒಪ್ಪಿಕೊಂಡಿತು.‌ ಇದರೊಂದಿಗೆ ಕೆಪಿಎಲ್ ನಾಲ್ಕನೇ ಆವೃತ್ತಿಯಲ್ಲಿ ಪವರ್ ಫೈಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ ಆಗಿ ಟೀಮ್ ಖುಷಿ‌ ಕ್ರಿಕೆಟರ್ಸ್, ತೃತೀಯ ಸ್ಥಾನ ಇಲೆವೆನ್ ಸೋಲ್ಡರ್ಸ್ ತಂಡ ಪಡೆಯಿತು.

ಮೂರನೇ ದಿನದಲ್ಲಿ ಪಾಲಿಕೆ ಸದಸ್ಯರ ತಂಡ ಹಾಗೂ ಪತ್ರಕರ್ತರ ತಂಡ ಗಳ ನಡುವೆ ಅಫಿಷಿಯಲ್ ಕ್ರಿಕೆಟ್ ಆಯೋಜನೆ ಮಾಡ ಲಾಗಿತ್ತು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಬ್ಯಾಟಿಂಗ್ ಮಾಡುವ ಮೂಲಕ ಅಫಿಷಿ ಯಲ್ ಪಂದ್ಯಾವಳಿ ಉದ್ಘಾಟಿಸಿ ದರು. ಪತ್ರಕರ್ತರ ತಂಡ ಕೇವಲ ಐದು ರನ್ ನಿಂದ ಸೋಲು ಕಂಡಿತು. ಮೇಯರ್ ಎಸ್.ಟಿ. ವೀರೇಶ್ ಅವರು ಮೊದಲ ಬ್ಯಾಟಿಂಗ್ ಗೆ ಇಳಿದು ಉತ್ತಮ ಆರಂಭ ಒದಗಿಸಿ ಕೊಟ್ಟರು. 

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹಾದು ಹೋಗುತ್ತಿದ್ದ ಲಿಂಗಾಯತ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಕ್ರಿಕೆಟ್ ಆಟದಲ್ಲಿ ಪಾಲ್ಗೊಂಡು  ಬ್ಯಾಟಿಂಗ್, ಬೌಲಿಂಗ್ ಮಾಡಿ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ವರ್ತಕರಾದ ರಾಘವೇಂದ್ರ ಎನ್. ದಿವಾಕರ್, ಗೌಡ್ರು ಬಸವರಾಜಪ್ಪ, ಶಿವಪ್ಪ, ಕೆಎಸ್ ಸಣ್ಣಿಂಗಪ್ಪ, ದೇವರಾಜ್, ಎನ್.ಟಿ. ನಾಗರಾಜ್, ಮಧುನಾಗರಾಜ್ ಸೇರಿದಂತೆ ಇತರರು ಇದ್ದರು.

error: Content is protected !!