ದಾವಣಗೆರೆ, ಮಾ.16- ದೈಹಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ. ಕ್ರೀಡೆ ಜೀವನದ ಒಂದು ಭಾಗವಾಗಿ ರೂಪುಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ.ಪ್ರ.ದ. ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ದಾವಣಗೆರೆ ವಲಯ ಹಾಗೂ ಅಂತರ ವಲ ಯದ ಬಾಲ್ ಬ್ಯಾಡ್ಮಿಂಟನ್ ಪುರುಷರ ಮತ್ತು ಮಹಿಳೆ ಯರ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಒಂದು ಹವ್ಯಾಸವಾಗಬೇಕು. ದಿನನಿತ್ಯ 5 ಕಿ.ಮೀ. ಓಟವನ್ನು ರೂಢಿಸಿಕೊಂಡರೆ ದೀರ್ಘ ಕಾಲದವರೆಗೆ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಬಹುದು ಎಂದರು. ನಿತ್ಯ ದೈಹಿಕ ವ್ಯಾಯಾಮ ಮಾಡಿದಲ್ಲಿ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿರುತ್ತದೆ ಹಾಗೂ ಖಿನ್ನತೆ ದೂರವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ತೂ.ಕ. ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಬಿಐ ಶಾಖಾ ವ್ಯವಸ್ಥಾಪಕ ದಿನೇಶ್‌ಚಂದ್ರ ತ್ರಿಪಾಠಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ವೀರೇಂದ್ರ, ಪ್ರೊ. ಸುನೀತ, ಪ್ರೊ. ಭೀಮಣ್ಣ ಸುಣಗಾರ, ಪ್ರೊ. ಸದಾಶಿವ, ಮಹ್ಮದ್ ಖಾನ್, ಪ್ರೊ. ಶಂಕರ್ ಶೀಲಿ, ಡಾ. ತಿಪ್ಪಾರೆಡ್ಡಿ, ಡಾ. ಪ್ರಕಾಶ್ ಹಲಗೇರಿ, ಪ್ರೊ. ಗೌರಮ್ಮ, ದಾದಾಪೀರ್ ನವಿಲೇಹಾಳ್, ಡಾ. ಮಹೇಶ್ ಪಾಟೀಲ್, ಶಶಿಕಲಾ ಸೇರಿದಂತೆ ಇತರರಿದ್ದರು.