ಹರಪನಹಳ್ಳಿ, ಆ.2- ತಾ ಲ್ಲೂಕಿನ ಚಿಕ್ಕಮಜ್ಜಿಗೇರಿಯ ಗ್ರಾಮ ಸ್ಥರ ಚಾಣಾಕ್ಷತನದಿಂದ ಸುಮಾರು 5 ವರ್ಷದ ಚಿರತೆ ಸೆರೆಯಾಗಿದೆ.
ಪ್ರಾದೇಶಿಕ ವಲಯ ಅರಣ್ಯಾಧಿ ಕಾರಿ ಭರತ್ ಡಿ. ತಳವಾರ ನೇತೃತ್ವದ ತಂಡ ಚಿರತೆ ಹಿಡಿಯುವಲ್ಲಿ ಯಶಸ್ವಿ ಯಾಗಿದೆ. ಕಳೆದ ರಾತ್ರಿ ಗ್ರಾಮ ಹೊರವಲಯದಲ್ಲಿರುವ ಪೂಜಾರ್ ಬಸಪ್ಪನವರ ಜಮೀನಿನಲ್ಲಿರುವ ರೇಷ್ಮೆ ಮನೆಯಲ್ಲಿದ್ದ ಆಕಳು, ಕರುವಿನ ರಕ್ತ ಕುಡಿದು ಹೋಗಿತ್ತು.
ಗ್ರಾಮಸ್ಥರು ಮರುದಿನ ಚಿರತೆ ಬರುವ ನಿರೀಕ್ಷೆಯಿಂದ ಆ ಕರುವಿನ ಮಾಂಸವನ್ನು ಅದೇ ರೇಷ್ಮೆ ಮನೆಯಲ್ಲಿ ತೂಗಿ ಹಾಕಿ ಕದಕ್ಕೆ ಹಗ್ಗ ಕಟ್ಟಿದ್ದರು. ಚಿರತೆ ಮಾಂಸ ತಿನ್ನಲು ಒಳಗೆ ಹೋಗುತ್ತಿದ್ದಂತೆ ದೂರದಿಂದಲೇ ಹಗ್ಗ ಎಳೆದು ಬಾಗಿಲು ಮುಚ್ಚಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.