ಹೊನ್ನಾಳಿ, ಮೇ 23 – ತಹಶೀಲ್ದಾರ್ ಬಸನಗೌಡ ಕೋಟೂರ ನೇತೃತ್ವದಲ್ಲಿ ಭಾನುವಾರ ದಾಳಿ ನಡೆಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಆರ್.ಬಂತಿ ತಾಲ್ಲೂಕಿನ ಮಲೇಕುಂಬಳೂರು ಗ್ರಾಮದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್‍ಗೆ ಬೀಗ ಮುದ್ರೆ ಹಾಕಿದ ಘಟನೆ ನಡೆದಿದೆ.
ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸೂಚನೆಯ ಮೇರೆಗೆ ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಹಿನ್ನೆಲ್ಲೆಯಲ್ಲಿ ತಾಲ್ಲೂಕಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು ತಾಲ್ಲೂಕಿನಾದ್ಯಾಂತ ಈ ರೀತಿಯ ಪರಿಶೀಲನೆ ಕಾರ್ಯ ಮುಂದುವರೆಸುವುದಾಗಿ ತಿಳಿಸಿರುವರು.
ಮಲೇಕುಂಬಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಕಾಸ್ ಪ್ರತಿಕ್ರಿಯಿಸಿ ಗ್ರಾಮದಲ್ಲಿ 17 ವರ್ಷಗಳಿಂದ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ.
ದಾವಣಗೆರೆಯ ಸರಸ್ವತಿ ನಗರದ ನಿವಾಸಿ ರಂಗನಾಥ್ ತಾಲ್ಲೂಕಿನ ಮಲೇಕುಂಬಳೂರು ಗ್ರಾಮದಲ್ಲಿ ಅನಧಿಕೃತ ವಾಗಿ ಕ್ಲಿನಿಕ್ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ರಂಗನಾಥ್ ಬಳಿ ಕ್ಲಿನಿಕ್ ನಡೆಸಲು ಬೇಕಿರುವ ಅಗತ್ಯವಾದ ದಾಖಲೆಗಳನ್ನು ಕೇಳಿದರೆ ರಂಗನಾಥ್ ಯಾವುದೇ ದಾಖಲೆ ಗಳನ್ನು ತೋರಿಸಲಿಲ್ಲ ಎಂಬುದಾಗಿ ತಿಳಿದುಬಂದಿದೆ.
ಡೆಡ್‍ಲೈನ್: ಕ್ಲಿನಿಕ್ ನಡೆಸಲು ಅಗತ್ಯವಾದ ದಾಖಲೆ ಗಳನ್ನು ಹಾಗೂ ವೈದ್ಯ ವೃತ್ತಿ ನಡೆಸಲು ಅಗತ್ಯವಾದ ವಿದ್ಯಾ ರ್ಹತೆ ಹೊಂದಿದ ಪ್ರಮಾಣ ಪತ್ರಗಳನ್ನು 24 ಗಂಟೆಗ ಳೊಳಗೆ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಗೆ ಹಾಜರು ಪಡಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸ ಲಾಗುವುದು ಎಂದು ತಾಲ್ಲೂಕು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇಒ ಗಂಗಾಧರಮೂರ್ತಿ, ಉಪತಹಶೀಲ್ದಾರ್ ಇಂಗ ಳಗುಂದಿ, ರಾಜಸ್ವ ನಿರೀಕ್ಷಕ ರಮೇಶ್, ಆರೋಗ್ಯಾಧಿಕಾರಿ ಡಾ. ಕೆಂಚಪ್ಪ, ಸಿಪಿಐ ದೇವರಾಜ್, ಪಿಎಸ್‍ಐ ಬಸನಗೌಡ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.