ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಶ್ರೀ
ಹರಿಹರ, ಮೇ 23- ಜಗತ್ತಿಗೊಬ್ಬರೇ ಜಗಜ್ಯೋತಿ ಬಸವಣ್ಣ. ಅವರು ಜಗತ್ತಿನ ಸಕಲ ಒಳ್ಳೆಯದಕ್ಕೂ ‘ಅಣ್ಣ’ . ಅವರ ಆದರ್ಶ ಅಂದಿಗೂ ಪ್ರಸ್ತುತ, ಇಂದಿಗೂ ಪ್ರಸ್ತುತ ಎಂದು ಹರಿ ಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಹರಿಹರ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
12ನೇ ಶತಮಾನದಲ್ಲಿ ತುಂಬಿ ತುಳುಕುತ್ತಿದ್ದ ಅಂಧಕಾರ, ಮೇಲು-ಕೀಳು, ಅಸಮಾನತೆಗ ಳನ್ನೆಲ್ಲಾ ತೊಡೆದುಹಾಕಲು ಉದಯಿಸಿದ ಸೂರ್ಯನೇ ಬಸವಣ್ಣ. ಕೆಳವರ್ಗದವರ ಬದು ಕನ್ನು, ಕನಸನ್ನು, ವಿದ್ಯೆಯನ್ನು ಮೇಲ್ವರ್ಗದವರು ಅತ್ಯಂತ ವ್ಯವಸ್ಥಿತವಾಗಿ ನಾಶ ಮಾಡುತಿದ್ದರು. ಶೂದ್ರರ ನೆರಳು ಕೂಡ ಬೀಳಬಾರದು ಎನ್ನುವ ಅಮಾನವೀಯ ಪದ್ಧತಿ ಆ ಕಾಲಕ್ಕೆ ಇತ್ತು. ಅಂತಹ ಅಮಾನವೀಯ ಪದ್ಧತಿಗಳಿಗೆಲ್ಲಾ ತಿಲಾಂಜಲಿ ಇಟ್ಟು ಸಮಾನತೆಯ ಮಾರ್ಗ ತೋರಿದವರು ಬಸವಣ್ಣನವರು ಎಂದರು.
ಮೌಢ್ಯವೇ ತುಂಬಿಕೊಂಡಿದ್ದ ಆ ಕಾಲಕ್ಕೆ ಅಂತರ್ಜಾತಿ ಮದುವೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಬಸವಣ್ಣ ಹರಳ ಯ್ಯನ ಮಗನಿಗೆ ಮಧುವರಸನ ಮಗಳನ್ನು ಕೊಟ್ಟು ಮದುವೆ ಮಾಡಿಸಿದರು. ಕಲ್ಯಾಣ ದಲ್ಲಿ ಕ್ರಾಂತಿಯ ಕಿಡಿ ಹುಟ್ಟಿಕೊಂಡಿದ್ದೇ ಅಲ್ಲಿಂದ. ಅದು ಬಹಳ ದೊಡ್ಡ ಮನ್ವಂತರ ಕಾಲ. ವಚನ ಶ್ರೇಷ್ಠರ ಕಾಲ. ಅಷ್ಟು ದೊಡ್ಡ ಸಾಮಾಜಿಕ ಬದಲಾವಣೆಗೆ ಬಸವ ಣ್ಣನವರು ಕೈ ಹಾಕುತ್ತಾರೆ ಎಂದರೆ ಅವರ ಬದ್ಧತೆ ಎಷ್ಟಿತ್ತು ಎಂಬುದನ್ನು ಗಮನಿ ಸಬೇಕು. ಅದಕ್ಕಾಗಿಯೇ ರಾಷ್ಟ್ರಕವಿ ಕುವೆಂಪು §ಕಾರ್ತಿಕ ಕತ್ತಲಲ್ಲಿ ಆಕಾಶದೀಪವಾಗಿ ನೀ ಬಂದೆ¬ ಅಂತ ಬರೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಡಿಜಿಪಿ ಭಾಸ್ಕರರಾವ್, ಧರ್ಮದರ್ಶಿ ಚಂದ್ರಶೇಖರ ಪೂಜಾರ್, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ ಸಿಂಗ್ ಉಪಸ್ಥಿತರಿದ್ದರು.