ರಾಜ್ಯ ಬಜೆಟ್ : ಹರಪನಹಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ

ಹರಪನಹಳ್ಳಿ,ಮಾ.15- ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಅಂಗನವಾಡಿ ಮಹಿಳೆಯರ ಬೇಡಿಕೆಗಳ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪವಾಗದಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ರಾಜ್ಯ ಸಮಿತಿಯ ಕರೆ ಮೇರೆಗೆ ಉಪವಾಸ ಸತ್ಯಾಗ್ರಹ ನಡೆಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. 

ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಅಂಗನವಾಡಿ ಮಹಿಳೆಯರ ಬೇಡಿಕೆಗಳ ಬಗ್ಗೆ ಬಜೆಟ್‍ನಲ್ಲಿ ಅನು ಕೂಲ ಮಾಡುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಭರ ವಸೆ ನೀಡಿದ್ದರು. ಆದರೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾ ಪವಾಗಲಿಲ್ಲ. ಕಾರ್ಯಕರ್ತರಿಗೆ  ಅನ್ಯಾಯವಾಗಿದೆ. ಆದ್ದರಿಂದ ಯಾವುದೇ ರೀತಿ ಸರ್ವೇ, ಎಂ.ಪಿ.ಆರ್. ವರದಿಯನ್ನು ನೀಡಲಾಗುವುದಿಲ್ಲ ಎಂದು ಹೇಳಿದರು. 

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯ ರನ್ನು ಖಾಯಂಗೊಳಿಸಬೇಕು, ಸೇವಾ ಹಿರಿತನದ ಆಧಾರದಲ್ಲಿ ಗೌರವ ಧನ ನೀಡಬೇಕು. ಇಎಸ್‌ಐ ಮತ್ತು ಪಿ.ಎಫ್. ಜಾರಿಯಾಗಬೇಕು. ನಿವೃತ್ತಿ ಆದವರಿಗೆ ಬೇಗನೆ ಇಡಿಗಂಟು ನೀಡಬೇಕು, ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರದಲ್ಲಿ ತೆರೆಯಬೇಕು, ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. 

ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡಿ, ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಅಧ್ಯಕ್ಷ ಗುಡಿಹಳ್ಳಿ ಹಾಲೇಶ್, ಕಾರ್ಯದರ್ಶಿ ಜಯಲಕ್ಷ್ಮಿ. ಖಜಾಂಚಿ ಸುಮಾ, ಮುಖಂಡರಾದ ಮಂಜುಳಾ ಉಪ್ಪಾರ, ಮಾಲತಿ, ಎಸ್. ಚಂದ್ರಮ್ಮ, ಬಿ.ದ್ರೌಪದಿಬಾಯಿ, ಎ.ಆರ್. ಅಕ್ಕಮ್ಮ, ಎಂ. ಹಜ್ರತ್‌ಬಾನು, ಟಿ. ಕೊಟ್ರಮ್ಮ, ಬಿ. ಸುನೀತಾ, ಕೆ.ಈಶ್ವರಿ ಹಾಗೂ ಇನ್ನಿತರರಿದ್ದರು.

error: Content is protected !!