ಆಕ್ಸಿಜನ್‌ ಸಿಲಿಂಡರ್‌ ಗಳ ವಿತರಣೆ

ಕೊಟ್ಟೂರು, ಮೇ 23- ಮಾಜಿ ಶಾಸಕ ನೇಮರಾಜ ನಾಯ್ಕ ಅವರು ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ 30 ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡಿ, ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.  

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಕೋಗಳಿ ಸಿದ್ದಲಿಂಗನಗೌಡ್ರು, ನಗರ ಘಟಕದ  ಅಧ್ಯಕ್ಷ ಬಿ.ಆರ್.ವಿಕ್ರಂ, ತಿಪ್ಪೇಸ್ವಾಮಿ, ಉಮಾಪತಿ ಬೊಮ್ಮರೆಡ್ಡಿ, ಏರ್‌ಟೆಲ್ ಚಂದ್ರು, ಕೆ.ಬಸವರಾಜ್, ಡಾ. ಪೃಥ್ವಿ ಹಾಗೂ ಸಿಬ್ಬಂದಿಯವರು ಹಾಜರಿದ್ದರು.

error: Content is protected !!