ಆರ್ಯ ಈಡಿಗ ಸಮುದಾಯದ ಜನಸಂಖ್ಯೆ ಕ್ಷೀಣ

ಹರಪನಹಳ್ಳಿಯಲ್ಲಿ ಪ್ರಣವಾನಂದ ಸ್ವಾಮೀಜಿ

ಹರಪನಹಳ್ಳಿ, ಮಾ.15- ಆರ್ಯ ಈಡಿಗ ಸಮುದಾಯದ ಜನಸಂಖ್ಯೆ ಕ್ಷೀಣಿಸುತ್ತಿದೆ. ಇದು ಹೀಗೇ ಆದರೆ ಮುಂದೊಂದು ದಿನ ಈ ಸಮುದಾಯ, ಸಮಾಜದಲ್ಲಿ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕವನ್ನು ರಾಣೇಬೆನ್ನೂರು ಶ್ರೀ ಪ್ರಣವಾನಂದ ಸ್ವಾಮೀಜಿ ವ್ಯಕ್ತಪಡಿಸಿದರು.

ಪಟ್ಟಣದ ಕಾಶಿ ಸಂಗಮೇಶ್ವರ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಆರ್ಯ ಈಡಿಗ ಬಂಧುಗಳ ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಸಮುದಾಯದ ದಂಪತಿಗಳು ಇನ್ನುಮುಂದೆ ಕಡ್ಡಾಯವಾಗಿ ಐದು ಮಕ್ಕಳನ್ನು ಹೆತ್ತು ಎರಡು ಮಕ್ಕಳನ್ನು ನೀವು ಸಾಕಿ, ಮೂರು ಮಕ್ಕಳನ್ನು ಮಠಕ್ಕೆ ಕೊಡಿ. ಅವರನ್ನು ನಾವು ಸಾಕಿ, ಸಲಹಿ ಸಮುದಾಯದ ಏಳಿಗೆಗೆ ಶ್ರಮಿಸುವಂತೆ ಅವರನ್ನು ತಯಾರು ಮಾಡುತ್ತೇವೆ ಎಂದರು.

ನಮ್ಮ ಸಮುದಾಯದ ಎಸ್.ಬಂಗಾರಪ್ಪ ನವರು ಹಿಂದೆ ರಾಜ್ಯದ ಮುಖ್ಯಮಂತ್ರಿಯಾ ಗಿದ್ದರು. ಮುಂದೊಂದು‌ ದಿನ ಮತ್ತೆ ನಮ್ಮ ಸಮಾಜದ ಒಬ್ಬರು ಖಂಡಿತವಾಗಿಯೂ ಈ ರಾಜ್ಯದ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ರಾಜಕೀಯ ಭವಿಷ್ಯ ನುಡಿದರು. ಅವರ ಭವಿಷ್ಯ ನಿಜವಾಗಲಿದೆಯಾ ಕಾದು ನೋಡಬೇಕು.

ರಾಜ್ಯದ ಎಂಆರ್‌ಪಿಗಳಲ್ಲಿ ನಮ್ಮ ಸಮುದಾ ಯದ ಸಿಬ್ಬಂದಿಗಳನ್ನೇ ನೇಮಕ ಮಾಡಿಕೊಳ್ಳ ಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದ ಅವರು, ನಮ್ಮ ರಾಜಕಾರಣಿ ಗಳು ತಮ್ಮ ಜವಾಬ್ದಾರಿಯನ್ನು ಮರೆತಂತಿದೆ. ಸಮಾಜದ ಪರಿಸ್ಥಿತಿಯನ್ನು ಅವಲೋಕಿಸಿ, ಈ ಬಗ್ಗೆ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಬೇಕು. 

ಈಡಿಗ ಸಮಾಜವನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತುಳಿಯಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯುತ್ತಿದೆ ಎಂದ ಅವರು ನಮ್ಮ ಸಮಾಜದ ಜಾತ್ಯತೀತ ನಾಯಕರಾಗಿದ್ದ  ಎಸ್.ಬಂಗಾರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಎಲ್ಲಾ ಸಮಾಜಗಳ ಅಭಿವೃದ್ಧಿಗೂ ಶ್ರಮಿಸಿದ್ದರು. 

ಮೂಡಬಿದಿರೆಯ ಸತ್ಯಾನಂದ ತೀರ್ಥರು‌ ಮಾತನಾಡಿ, ‘ಸಂತರ ನಡೆ ಸಮಾಜದ ಬಂಧುಗಳ ಕಡೆ’ ಎನ್ನುವ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿದ್ದು, ಭಕ್ತರ ಸಹಕಾರವೇ ಶ್ರೀಗಳಿಗೆ ಬಲ. ಸಮಾಜ ಸೇವೆ ಮಾಡುವವರು ತ್ಯಾಗ ಮನೋಭಾವ ಹೊಂದಿರಬೇಕು. ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕೆಂದರೆ ಅದು ಸಂಘಟನೆಯಿಂದ ಮಾತ್ರ ಸಾಧ್ಯ. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಸಮಾಜವನ್ನು ಸಂಘಟಿಸಬೇಕು ಎಂದರು.

ಬೆಳಗಾವಿಯ ಅರುಣಾನಂದ ಶ್ರೀ ಮಾತ ನಾಡಿ, ಭಕ್ತಿ ಮಾರ್ಗದಲ್ಲಿ ನಡೆದರೆ ಮಾತ್ರ ಉತ್ತಮ ಫಲ ಸಿಗಲು ಸಾಧ್ಯ ಎಂದರು. ಹಡಗಲಿಯ ಅಯ್ಯನಗೌಡ, ಸಮಾಜದ ಗೌರವ ಅಧ್ಯಕ್ಷ ಈ. ದೇವದಾಸ್, ಅಧ್ಯಕ್ಷ ಎನ್. ಜಗದೀಶ್ ಗೌಡ್ರು, ಸಹ ಕಾರ್ಯದರ್ಶಿ ವೆಂಕಟರಾಜು, ಈಡಿಗ ಬಂಧು ಸಂಪಾದಕ ಶ್ರೀಕಾಂತ್, ಕಾರ್ಯದರ್ಶಿ ಕಂಚಿಕೇರಿ ಈ. ವೆಂಕಟೇಶ್,  ಮಹಿಳಾ ಅಧ್ಯಕ್ಷೆ ಶಶಿಕಲಾ, ನಿಲಯ ಪಾಲಕ ಅಂಬರೀಶ್ ಗುತ್ತೇ ದಾರ್, ಮುಖಂಡರಾದ ಉಮೇಶ್, ಆಂಜನೇಯ, ಬೇವಿನಹಳ್ಳಿ ಚನ್ನಬಸಪ್ಪ, ಫಕ್ಕೀರಪ್ಪ, ಜೀವಪ್ಪ, ಪದ್ಮನಾಭ, ನಾರಾಯಣಸ್ವಾಮಿ, ರೋಹಿತ್ ಕುಮಾರ್, ದುರ್ಗಪ್ಪ, ಮಂಜಣ್ಣ, ಹೊಸಪೇಟೆ ವಕೀಲ ನಾಗರಾಜ್ ಇನ್ನಿತರರಿದ್ದರು.

error: Content is protected !!