ದಾವಣಗೆರೆ, ಮೇ 19- ಶ್ರೀಶೈಲ ಪೀಠದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಶ್ವನಾಥ ಹಿರೇಮಠ ಹಾಗೂ ಕಾಡಯ್ಯ ಅವರುಗಳು ಕೊರೊನಾದಿಂದ ಲಿಂಗೈಕ್ಯರಾಗಿದ್ದು, ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಖೇದವನ್ನು ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದಾರೆ.
ಮಹಾಸನ್ನಿಧಿಯವರ ಅಪ್ಪಣೆಯ ಮೇರೆಗೆ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕರೂ, ಶ್ರೀಶೈಲ ಪೀಠದ ಸಲಹಾ ಸಮಿತಿ ಸದಸ್ಯರೂ ಆದ ಭದ್ರಯ್ಯ ಸ್ವಾಮಿ, ಶ್ರೀಶೈಲ ಪೀಠದ ಏಜೆಂಟರಾದ ಎಂ.ಎಸ್.ಬಸವರಾಜಸ್ವಾಮಿ, ಸೇವಾ ಸಮಿತಿ ಮುಖ್ಯ ವ್ಯವಸ್ಥಾಪಕ ಎಂ.ಬಿ.ಮಂಜುನಾಥ ಸ್ವಾಮಿ ಅವರುಗಳು ಕೋವಿಡ್‌ನಿಂದ ಇಹಲೋಕ ತ್ಯಜಿಸಿದ ವಿಶ್ವನಾಥ ಹಿರೇಮಠ ಕುಟುಂಬಕ್ಕೆ 50 ಸಾವಿರ ರೂ.ಗಳು ಹಾಗೂ ಕಾಡಯ್ಯಸ್ವಾಮಿ ಕುಟುಂಬಕ್ಕೆ 25 ಸಾವಿರ ರೂ. ಗಳ ಚೆಕ್ ವಿತರಿಸಿದರು.
ವಿಶ್ವನಾಥ ಹಿರೇಮಠ ಮತ್ತು ಕಾಡಯ್ಯ ಅವರುಗಳ ನಿಧನಕ್ಕೆ ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.