ತಿಂಗಳ ಅಂಗಳ ಬಳಗದಿಂದ ಭಾವಕವಿ ಎನ್ನೆಸ್ಸೆಲ್‌ಗೆ ಭಾವಪೂರ್ಣ ನಮನ

ದಾವಣಗೆರೆ, ಮಾ.14- ತಿಂಗಳ ಅಂಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಕವಿ ಹೆಚ್.ಜೆ. ಪ್ರಭು ಗೊಲ್ಲರಹಳ್ಳಿ ಅವರ ಆತಿಥ್ಯದಲ್ಲಿ ನಗರದ ಸೋಮೇಶ್ವರ ವಿದ್ಯಾಲಯದ ಎದುರಿನ ಕಲ್ಪತರು ಕಾನ್ವೆಂಟ್ ಬಳಿಯ ಅವರ ನಿವಾಸದಲ್ಲಿ ಮಾರ್ಚ್ ಮಾಹೆಯ ಮಿಲನ ಆಯೋಜಿಸಲಾಗಿತ್ತು.  

ಹಿರಿಯ ಕವಿ, ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. 

ಲೇಖಕ ಗಂಗಾಧರ ಬಿ.ಎಲ್. ನಿಟ್ಟೂರ್, ಕವಿ ಪ್ರಭು ಗೊಲ್ಲರಹಳ್ಳಿಯವರ ಮುಂಬರಲಿರುವ ಕವನ ಸಂಕಲನದ ಹಸ್ತಪ್ರತಿಯ ಕವನಗಳ ಒಳನೋಟದ ಅವಲೋಕನ ಮಾಡಿದರು. 

ಕವಿ ಸಂತೇಬೆನ್ನೂರು ಫೈಜ್ನ ಟ್ರಾಜ್ ಅವರು ಗಜಲ್ ಪ್ರಕಾರ, ಸಾಹಿತ್ಯ ಲೋಕದಲ್ಲಿ ಅದರ ಸ್ಥಾನ ಮಾನ ಹಾಗೂ ರಚನೆಯ ನಿಯ ಮಾವಳಿ ಕುರಿತು ವಿವರಿಸಿದರು. ಜೊತೆಗೆ ಲಕ್ಷ್ಮಿ ನಾರಾಯಣ ಭಟ್ಟರ `ಬನ್ನಿ ಭಾವನೆಗಳೇ ಬನ್ನಿ’ ಎಂಬ ಭಾವಗೀತೆ ಹಾಡಿದರು. ಹಿರಿಯ ಕವಿ ಡಾ. ಆನಂದ್ ಋಗ್ವೇದಿ ಕಾರ್ಯಕ್ರಮ ಕುರಿತು ಹಿತ ನುಡಿದರು. 

ರಾಜೇಂದ್ರಪ್ರಸಾದ್ ನೀಲಗುಂದ, ಪಾಪುಗುರು, ಎನ್. ಎಸ್. ಸತೀಶ್, ತಾರೇಶ್ ಕೆ.ಪಿ ಅಣಬೇರು, ವೀರೇಶ್ ಬಿ. ಜಿ.ಎಂ, ಮಲ್ಲಮ್ಮ ನಾಗರಾಜ್, ಸಂಧ್ಯಾ ಸುರೇಶ್, ಸತ್ಯಭಾಮ ಮಂಜುನಾಥ್, ಅನ್ನಪೂರ್ಣ ಪಾಟೀಲ್ ಅವರು ಸ್ವರಚಿತ ಕವನ ವಾಚಿಸಿದರು. 

ಶಿಕ್ಷಣ ಇಲಾಖೆಯ ಎ.ಜಿ. ಸೈಫುಲ್ಲಾ ಅವರಿಂದ ಗಜಲ್ ಗಾಯನ ಹಾಗೂ ಕು. ರಿಷಿ ಪ್ರಭು ಅವರಿಂದ ನೃತ್ಯ ಪ್ರಸ್ತುತಿ ನಡೆಯಿತು.

error: Content is protected !!